ETV Bharat / state

ಚಿಕ್ಕಬಳ್ಳಾಪುರದಲ್ಲಿ ಮತ್ತೆ ಕಂಪಿಸಿದ ಭೂಮಿ: ಮನೆಯಿಂದ ಹೊರ ಬಂದು ಚಳಿಯಲ್ಲೇ ಕಾಲ ಕಳೆದ ಗ್ರಾಮಸ್ಥರು - ಚಿಕ್ಕಬಳ್ಳಾಪುರ ತಾಲೂಕಿನ ವಿವಿಧೆಡೆ ಭೂಕಂಪ

ಚಿಕ್ಕಬಳ್ಳಾಪುರ ತಾಲೂಕಿನ ವಿವಿಧೆಡೆ ಭೂಕಂಪದ ಅನುಭವವಾಗಿದೆ. ತಡರಾತ್ರಿ 3 ಗಂಟೆಯಿಂದ 2-3 ಬಾರಿ ಭೂಮಿ ಕಂಪಿಸಿದೆ. ಇದರಿಂದ ಭಯಭೀತರಾದ ಗ್ರಾಮಸ್ಥರು ಮನೆಯ ಒಳಗಡೆ ಇರಲು ಹಿಂದೇಟು ಹಾಕಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮತ್ತೆ ಕಂಪಿಸಿದ ಭೂಮಿ
ಚಿಕ್ಕಬಳ್ಳಾಪುರದಲ್ಲಿ ಮತ್ತೆ ಕಂಪಿಸಿದ ಭೂಮಿ
author img

By

Published : Jan 5, 2022, 10:39 AM IST

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ತಾಲೂಕಿನ ಹಲವು ಗ್ರಾಮಗಳಲ್ಲಿ ಇಂದು ಮುಂಜಾನೆ 3 ಗಂಟೆಗೆ ಭೂಮಿ ಕಂಪಿಸಿದ್ದು ಜನರು ಮತ್ತೊಮ್ಮೆ ಬೆಚ್ಚಿಬಿದ್ದಿದ್ದಾರೆ. ರಿಕ್ಟರ್ ಮಾಪಕದಲ್ಲಿ​ 2.6 ತೀವ್ರತೆಯ ಭೂಕಂಪ ದಾಖಲಾಗಿದೆ.

ತಾಲೂಕಿನ ಶೆಟ್ಟಿಗೇರೆ, ಅಡ್ಡಗಲ್, ಬೀರಗಾನಹಳ್ಳಿ, ಗೊಲ್ಲಹಳ್ಳಿ, ಬೋಗಪರ್ತಿ ಸೇರಿದಂತೆ ಹಲವು ಗ್ರಾಮಗಳ ಸುತ್ತಮುತ್ತಲ ಹಳ್ಳಿಗಳಲ್ಲಿ ಸುಮಾರು 3 ಸೆಂಕೆಡ್​ಗಳ ಕಾಲ 2.6 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗ್ರಾಮಸ್ಥರಿಗೆ ಭೂಮಿ ಕಂಪಿಸಿದ ಅನುಭವ ಉಂಟಾದ ಹಿನ್ನೆಲೆ ಭಯಗೊಂಡು ಮನೆಯಿಂದ ಹೊರ ಬಂದು ಚಳಿಯಲ್ಲೇ ಕಾಲ ಕಳೆದಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮತ್ತೆ ಕಂಪಿಸಿದ ಭೂಮಿ

ಕಳೆದ ತಿಂಗಳು ಇವೇ ಗ್ರಾಮಗಳಲ್ಲಿ ಭೂಕಂಪ ಸಂಭವಿಸಿತ್ತು. ಸಾಕಷ್ಟು ಮನೆಗಳು ಬಿರುಕು ಬಿಟ್ಟಿದ್ದು, ಗ್ರಾಮಸ್ಥರು ಭಯಭೀತರಾಗಿದ್ದರು. ಜಿಲ್ಲೆಯಲ್ಲಿ ಕಳೆದ 30 ದಿನಗಳಲ್ಲಿ 3 ಬಾರಿ ಭೂಕಂಪ ಸಂಭವಿಸಿದ್ದು, ಸಾಕಷ್ಟು ಕುಟುಂಬಗಳು ಮನೆಗಳನ್ನು ತೊರೆದು ಮತ್ತೊಂದು ಸ್ಥಳಗಳಿಗೆ ತೆರಳಿದ್ರು. ಆದರೆ, ಕಳೆದ 10 ದಿನಗಳಿಂದ ಯಾವುದೇ ಘಟನೆ ಬೆಳಕಿಗೆ ಬಾರದ ಹಿನ್ನೆಲೆ ಮತ್ತೆ ಗೂಡು ಸೇರಿಕೊಂಡಿದ್ದರು. ಇದೀಗ ಮತ್ತೆ ಭೂಮಿ ಕಂಪಿಸಿರುವುದರಿಂದ ಗ್ರಾಮವನ್ನು ತೊರೆಯುವ ಆಲೋಚನೆಗೆ ಮುಂದಾಗಿದ್ದಾರೆ.

ಓದಿ: ರಕ್ಷಣಾ ಸಚಿವರ ಕೈ ಸೇರಲಿದೆ ಹೆಲಿಕಾಪ್ಟರ್ ದುರಂತದ ತನಿಖಾ ವರದಿ: ಗೊತ್ತಾಗಲಿದೆಯಾ ನಿಖರ ಕಾರಣ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.