ಚಿಕ್ಕಬಳ್ಳಾಪುರ: ರಾತ್ರಿ ವೇಳೆ ಸುರಿದ ಧಾರಾಕಾರ ಮಳೆಗೆ ಚರಂಡಿ ನೀರು ಮನೆಗೆ ನುಗ್ಗಿದ ಘಟನೆ ತಾಲೂಕಿನ ಕಂದವಾರದಲ್ಲಿ ನಡೆದಿದೆ.
ರಾತ್ರಿ ಸುರಿದ ಮಳೆಗೆ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು, ಚಿಕ್ಕಬಳ್ಳಾಪುರ ತಾಲೂಕಿನ ಕಂದವಾರ ನಿವಾಸಿ ವೆಂಕಟರಣಪ್ಪ ಎಂಬುವರ ಮನೆಗೆ ಮಳೆಯ ನೀರಿನ ಜೊತೆಗೆ ಚರಂಡಿ ನೀರು ಮನೆಗೆ ನುಗ್ಗಿ ರಾತ್ರಿ ಪೂರ್ತಿ ಪರದಾಡುವಂತಾಗಿದೆ.
ಸಕಾಲಕ್ಕೆ ಮಳೆ ಬೀಳದೆ ಒಂದು ಕಡೆ ರೈತರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದರೆ. ಆದರೆ, ಈಗ ಆಗುವ ಅಷ್ಟೋ ಇಷ್ಟೋ ಮಳೆಯಿಂದಾಗಿ ಚರಂಡಿಯ ನೀರೆಲ್ಲಾ ಮನೆಗೆ ನುಗ್ಗಿ ಪಡಬಾರದ ಕಷ್ಟ ಅನುಭವಿಸುವಂತಾಗಿದೆ. ಉತ್ತರ ಕರ್ನಾಟಕದಲ್ಲಿ ಸುರಿದ ಭಾರಿ ಮಳೆಗೆ ಜನ ಯಾವ ಯಾವ ರೀತಿ ತತ್ತರಿಸಿದ್ದಾರೆಂದು ಕಣ್ಣಾರೆ ಎಲ್ಲರೂ ನೋಡಿದ್ದಾರೆ. ಆದರೆ, ಇಲ್ಲಿ ಬರುವ ಅಲ್ಪ ಮಳೆಗೆ ಅಧಿಕಾರಿಗಳು, ಜನನಾಯಕರುಗಳು ಯಾವುದೇ ಕ್ರಮಗಳನ್ನು ತಗೆದುಕೊಳ್ಳದೇ ಇರುವುದು ಈ ರಂಪಾಟಕ್ಕೆ ಕಾರಣವೆಂದು ಸಾರ್ವಜನಿಕರು ದೂರಿದ್ದಾರೆ.