ಚಿಕ್ಕಬಳ್ಳಾಪುರ: ಬಿಜೆಪಿ ಶಾಸಕರು ಲಂಚ ತೆಗೆದುಕೊಳ್ಳುವುದರಲ್ಲಿ ನಿಸ್ಸೀಮರು, ಇವತ್ತು ಇದ್ದ ಸಚಿವರು ನಾಳೆ ಇರಲ್ಲ ಎಂದು ಜನಧ್ವನಿ ಕಾರ್ಯಕ್ರಮದ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಮುಂದಿನ ಚುನಾವಣೆಯಲ್ಲಿ 5 ತಾಲೂಕುಗಳಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸವಿದೆ. ಕಳೆದ ಬಾರಿ ಆಪರೇಷನ್ ಕಮಲದಿಂದ ಬಿಜೆಪಿಯವರು ಅಧಿಕಾರ ಹಿಡಿದರು. ಚುನಾವಣೆ ವೇಳೆ ನೋಟುಗಳ ಸುರಿಮಳೆ ಹರಿದಿದೆ. ಕೋವಿಡ್ನಿಂದ ನೊಂದ ವ್ಯಾಪಾರಸ್ಥರಿಗೆ ಹಣ ಕೊಡುವುದಾಗಿ ಹೇಳಿದರು. ಹಲವರಿಗೆ 5 ಸಾವಿರ ಹಣ ಕೊಡುವುದಾಗಿ ಹೇಳಿಕೆ ನೀಡಿದ್ದರು. ಆದರೆ ಯಾರಿಗೂ ಹಣ ಬಂದಿಲ್ಲ. ಅಡುಗೆ ಅನಿಲ, ವಿದ್ಯುತ್ ಶುಲ್ಕ, ಸಿಮೆಂಟ್, ಜಲ್ಲಿಕಲ್ಲು, ತೊಗರಿ ಬೇಳೆ, ಅಡುಗೆ ಎಣ್ಣೆ ಎಲ್ಲಾ ದಿನನಿತ್ಯ ಸರಕುಗಳ ಬೆಲೆ ಹೆಚ್ಚಾಗಿದೆ. ಹಲವಾರು ಯೋಜನೆಗಳು ಬಂದಿದ್ದು ಕಾಂಗ್ರೆಸ್ ಅಧಿಕಾರದಲ್ಲಿ. ಬಿಜೆಪಿಯವರು ಒಂದು ಸೈಕಲ್, ಸೀರೆ ಬಿಟ್ಟರೆ ಯಾವೊಂದು ಯೋಜನೆ ಕೊಟ್ಟಿಲ್ಲಾ. ಲಂಚ ಮಾತ್ರ ಹೆಚ್ಚಾಗಿ ತಗೆದುಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಇದೇ ವೇಳೆ ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿಗೆ ಎಚ್ಚರಿಕೆ ನೀಡಿದ ಡಿಕೆ ಶಿವಕುಮಾರ್, ಡಿಸಿ-ಎಸ್ಪಿ ಅವರಿಗೆ ಹೇಳ್ತಾ ಇದ್ದೀನಿ ಕಾಂಗ್ರೆಸ್ ಕಾರ್ಯಕರ್ತರಿಗೆ ಕಿರುಕುಳ ಕೊಟ್ಟರೆ ನಿಮ್ಮ ವಿರುದ್ಧ ಹೋರಾಟ ಮಾಡುತ್ತೇವೆ. ತಿಳಿದುಕೊಳ್ಳಿ ಯಾವುದು ಶಾಶ್ವತವಿಲ್ಲಾ. ಇವತ್ತು ಇದ್ದ ಸಚಿವ ನಾಳೆ ಇಲ್ಲಾ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜು ಗೌಡಗೆ ಬಿ ಫಾರಂ ನೀಡಿದ ಕಟೀಲ್