ETV Bharat / state

ಈಟಿವಿ ಭಾರತ ವರದಿ ಫಲಶೃತಿ: ಅಕ್ರಮ ಮದ್ಯ ಮಾರಾಟ ತಾಣಗಳ ನಾಶ

ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲೂಕಿನ ಗಡಿ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗುತ್ತಿದ್ದ ಕಾರಣ, ಜುಲೈ 19ರಂದು ಈಟಿವಿ ಭಾರತದಲ್ಲಿ ಈ ಕುರಿತು ವರದಿ ಪ್ರಕಟಿಸಲಾಗಿತ್ತು. ವರದಿಯಿಂದ ಎಚ್ಚೆತ್ತುಕೊಂಡ ಪೊಲೀಸರು, ಅಕ್ರಮ ಮದ್ಯ ಮಾರಾಟ ತಾಣಗಳ ಮೇಲೆ ದಾಳಿ ಮಾಡಿ ಅವುಗಳನ್ನು ನಾಶಪಡಿಸಿದರು.

Destruction of illegal liquor sales sites
ಅಕ್ರಮ ಮದ್ಯ ಮಾರಾಟ ತಾಣಗಳ ನಾಶ
author img

By

Published : Jul 21, 2020, 1:56 PM IST

ಬಾಗೇಪಲ್ಲಿ (ಚಿಕ್ಕಬಳ್ಳಾಪುರ): ಜುಲೈ 19ರಂದು ಈಟಿವಿ ಭಾರತದಲ್ಲಿ ಪ್ರಕಟವಾದ ವರದಿಯಿಂದ ಎಚ್ಚೆತ್ತುಕೊಂಡ ಪೊಲೀಸರು, ಅಕ್ರಮ ಮದ್ಯ ಮಾರಾಟ ತಾಣಗಳ ಮೇಲೆ ದಾಳಿ ಮಾಡಿ ಅವುಗಳನ್ನು ನಾಶಪಡಿಸಿದ್ದಾರೆ.

ಬರದ ನಾಡಿನ ಗಡಿ ಗ್ರಾಮಗಳಲ್ಲಿ ಹರಿಯುತ್ತಿದೆ ಅಕ್ರಮ ಮದ್ಯ! ಎಂಬ ಶೀರ್ಷಿಕೆ ಅಡಿ ಈ ವರದಿ ಪ್ರಕಟಿಸಲಾಗಿತ್ತು. ಈ ವರದಿ ಸಾಮಾಜಿಕ ಜಾಲತಾಣದ ಮೂಲಕ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೂ ಹೋಗಿತ್ತು. ಈ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ಅಕ್ರಮ ಮದ್ಯ ಮಾರಾಟ ತಾಣಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ.

ಇದರಿಂದಾಗಿ ಕೆಲವರ ಮೇಲೆ ಪ್ರಕರಣವೂ ದಾಖಲಾಗಿದೆ ಎಂಬ ಮಾಹಿತಿ ಇದೆ. ಆಂಧ್ರಪ್ರದೇಶದ ಗಡಿ ಗ್ರಾಮಗಳ ಮದ್ಯ ವ್ಯಸನಿಗಳಿಂದ ಎದುರಾಗುತ್ತಿದ್ದ ಆತಂಕ ಕೊಂಚ ಮಟ್ಟಿಗೆ ಕಡಿಮೆಯಾಗಿದೆ ಎನ್ನಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.