ETV Bharat / state

ಯಾವುದೇ ಕಾರಣಕ್ಕೂ ಲಾಕ್‌ಡೌನ್ ಮಾಡುವ ಪ್ರಶ್ನೆಯೇ ಇಲ್ಲ..ಡಿಸಿಎಂ ಅಶ್ವಥ್‌ನಾರಾಯಣ ಸ್ಪಷ್ಟನೆ - Minister Ashwath Narayana statement

ಲಾಕ್​ಡೌನ್ ಮಾಡುವ ಪ್ರಶ್ನೆಯ ಬರುವುದಿಲ್ಲ. ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್​ ಬಳಕೆ ಹಾಗೂ ಉತ್ತಮ ಆಹಾರ ಸೇವನೆ ಮಾಡಿದರೆ ಎಲ್ಲವೂ ಸರಿ ಹೋಗುತ್ತದೆ. ಸೋಂಕಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅದರ ಜೊತೆಗೆ ಬದುಕಲು ಕಲಿಯಬೇಕು ಎಂದು ಉಪಮುಖ್ಯಮಂತ್ರಿ ಅಶ್ವಥ್‌ನಾರಾಯಣ ಹೇಳಿದ್ದಾರೆ.

Deputy Chief Minister Ashwath Narayana statement
ಯಾವುದೇ ಕಾರಣಕ್ಕೂ ಲಾಕ್‌ಡೌನ್ ಮಾಡುವ ಪ್ರಶ್ನೆಯೇ ಇಲ್ಲ..ಡಿಸಿಎಂ ಅಶ್ವಥ್‌ನಾರಾಯಣ ಸ್ಪಷ್ಟನೆ
author img

By

Published : Jul 3, 2020, 7:21 PM IST

ಚಿಕ್ಕಬಳ್ಳಾಪುರ: ಸೋಂಕಿತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಸರ್ಕಾರದ ಕರ್ತವ್ಯ. ಸೋಂಕಿತರು ಎಷ್ಟೇ ಆದರೂ ಚಿಕತ್ಸೆಯನ್ನ ನೀಡಲು ಸರ್ಕಾರ ಸಿದ್ದವಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಲಾಕ್‌ಡೌನ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ಉಪಮುಖ್ಯಮಂತ್ರಿ ಅಶ್ವಥ್‌ನಾರಾಯಣ ಹೇಳಿದ್ದಾರೆ.

ಯಾವುದೇ ಕಾರಣಕ್ಕೂ ಲಾಕ್‌ಡೌನ್ ಮಾಡುವ ಪ್ರಶ್ನೆಯೇ ಇಲ್ಲ..ಡಿಸಿಎಂ ಅಶ್ವಥ್‌ನಾರಾಯಣ ಸ್ಪಷ್ಟನೆ

ನಗರದ ಹೊರವಲಯದಲ್ಲಿರುವ ಮುದ್ದೇನಹಳ್ಳಿಗೆ ಭೇಟಿ ನೀಡಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೋಂ ಕೇರ್ ಸೆಂಟರ್‌ನಲ್ಲಿ ವ್ಯವಸ್ಥಿತವಾಗಿ ಚಿಕಿತ್ಸೆ ನೀಡಲಾಗುವುದು. ಅವರ ಮನೆಯಲ್ಲಿಯೇ ಎಲ್ಲಾ ಅಗತ್ಯ ಸೇವೆಗಳನ್ನ ನೀಡಲು ಸೌಲಭ್ಯ ಒದಗಿಸಲಾಗುತ್ತದೆ ಎಂದರು. ಲಾಕ್​ಡೌನ್ ಮಾಡುವ ಪ್ರಶ್ನೆಯ ಬರುವುದಿಲ್ಲ. ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್​ ಬಳಕೆ ಹಾಗೂ ಉತ್ತಮ ಆಹಾರ ಸೇವನೆ ಮಾಡಿದರೆ ಎಲ್ಲವೂ ಸರಿ ಹೋಗುತ್ತದೆ. ಲಾಕ್​ಡೌನ್ ಪೋಸ್ಟ್​ಪೋನ್ ಮಾಡಬಹುದು. ಆದರೆ, ಸೋಂಕಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅದರ ಜೊತೆಗೆ ಬದುಕಲು ಕಲಿಯಬೇಕು ಎಂದರು.

ಇದೇ ವೇಳೆ ಸಿದ್ದರಾಮಯ್ಯನವರ ಹೇಳಿಕೆಗೆ ಉತ್ತರಿಸಿದ ಡಿಸಿಎಂ, ಒಂದೆಡೆ ಕೊರೊನಾ, ಮತ್ತೊಂದೆಡೆ ಚೀನಾ, ಪಾಕಿಸ್ತಾನವಿದ್ದರೂ ಯಾವುದಕ್ಕೂ ಬಗ್ಗುವುದಿಲ್ಲ ಎಂಬ ಸಂದೇಶವನ್ನ ಪ್ರಧಾನಿ ನೀಡುತ್ತಿದ್ದಾರೆ. ಇಂತಹ ಪ್ರಧಾನಿಯನ್ನ ನಾವು ದೇಶದಲ್ಲಿ ಎಂದಿಗೂ ನೋಡಲು ಸಾಧ್ಯವಿಲ್ಲ. ಸಿದ್ದರಾಮಯ್ಯನವರು ಮೆಚ್ಚಿಕೊಳ್ಳಬೇಕು. ಒಳ್ಳೆಯ ನಾಯಕನಿಗೆ ಬೆಂಬಲ‌ ಕೊಡಬೇಕು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.