ETV Bharat / state

ಮೋದಿ ಆಡಳಿತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ: ವೀರಪ್ಪ ಮೊಯ್ಲಿ - National Congress Party Membership Campaign

ದೇಶದಲ್ಲಿ ರೈತರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸದೆ 700 ರೈತರ ಸಾವಿಗೆ ಕಾರಣವಾದ ಏಕೈಕ ಪಕ್ಷವೆಂದರೆ ಅದು ಬಿಜೆಪಿ ಮಾತ್ರ. ಜನಸಾಮಾನ್ಯರ ಬದುಕು ಸುಧಾರಿಸಲು ನಮಗೂ ಒಂದು ಅವಕಾಶ ನೀಡಿ ಎಂದು ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರ್ಕಾರ, ಈ ಏಳು ವರ್ಷಗಳಲ್ಲಿ ಮತದಾರರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ವಾಗ್ದಾಳಿ ನಡೆಸಿದ್ದಾರೆ.

Veerappa Moily
ನರೇಂದ್ರ ಮೋದಿ ಸರ್ಕಾರದ ವಿರುದ್ಧ ವೀರಪ್ಪ ಮೊಯ್ಲಿ ವಾಗ್ದಾಳಿ
author img

By

Published : Dec 13, 2021, 7:41 AM IST

ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಬೇಸರ ವ್ಯಕ್ತಪಡಿಸಿರು.

ನಗರದ ವಿನಯ್ ಸಮುದಾಯ ಭವನದಲ್ಲಿ ಜಿಲ್ಲಾ ಕಾಂಗ್ರೆಸ್, ಬ್ಲಾಕ್ ಕಾಂಗ್ರೆಸ್ ಸಮಿತಿ ಏರ್ಪಡಿಸಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನಸಾಮಾನ್ಯರ ಬದುಕು ಸುಧಾರಿಸಲು ನಮಗೂ ಒಂದು ಅವಕಾಶ ನೀಡಿ ಎಂದು ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರ್ಕಾರ, ಈ ಏಳು ವರ್ಷಗಳಲ್ಲಿ ಮತದಾರರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡಿದ್ದು, ಅವರಿಂದ ಏನೂ ಪ್ರಯೋಜನವಾಗಿಲ್ಲ. ದೇಶದ ಆರ್ಥಿಕತೆಯನ್ನು ಅಧೋಗತಿಗೆ ದೂಡುತ್ತಾ ಜಿಡಿಪಿಯನ್ನು ಪಾತಾಳ ಮುಟ್ಟಿಸಿದ್ದಾರೆ ಎಂದರು.

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 10 ರಿಂದ 11 ರಷ್ಟಿದ್ದ ಜಿಡಿಪಿ ಈಗ ಮೈನಸ್ 3 ರಿಂದ 4 ಇದೆ. ಡಿಮಾನಿಟೈಸೆಷನ್ ಜಾರಿಗೊಳಿಸುವ ಮೂಲಕ ಬಡವರು ಕಾರ್ಮಿಕರು, ಮಧ್ಯಮ ವರ್ಗದ ಬದುಕುವ ಹಕ್ಕನ್ನೇ ಕಿತ್ತುಕೊಳ್ಳಲಾಗಿದೆ. ಉದ್ಧಾರ ಮಾಡುತ್ತೇನೆಂದು ಹೇಳಿದ ಮೋದಿ, ಸಾಮಾನ್ಯರ ಕೈಯಲ್ಲಿದ್ದ ಪುಡಿಗಾಸು ಕೂಡ ಹಾಳಾಗುವಂತೆ ಮಾಡಿದ್ದಾರೆ. ಜಿಎಸ್‌ಟಿ ಅಂತ ಜಾರಿಗೆ ತಂದು ಸಣ್ಣ ಪುಟ್ಟ ವ್ಯಾಪಾರಿಗಳ ಬದುಕನ್ನು ಕಸಿದುಕೊಂಡರು. ಒಟ್ಟಾರೆ ಇವರ ಅಪಕ್ವ ಯೋಜನೆಗಳನ್ನು ಜನರ ಮೇಲೆ ಪ್ರಯೋಗ ಮಾಡಿದ್ದೇ ಮೊದಿ ಸರ್ಕಾರದ ದೊಡ್ಡ ಸಾಧನೆಯಾಗಿದೆ ಎಂದು ವ್ಯಂಗ್ಯವಾಡಿದರು.

ನರೇಂದ್ರ ಮೋದಿ ಸರ್ಕಾರದ ವಿರುದ್ಧ ವೀರಪ್ಪ ಮೊಯ್ಲಿ ವಾಗ್ದಾಳಿ

ದೇಶದಲ್ಲಿ ರೈತರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸದೆ 700 ರೈತರ ಸಾವಿಗೆ ಕಾರಣವಾದ ಏಕೈಕ ಪಕ್ಷವೆಂದರೆ ಅದು ಬಿಜೆಪಿ ಮಾತ್ರ. ಒಂದು ವರ್ಷಗಳ ಕಾಲ ನಿರಂತರ ಪ್ರತಿಭಟನೆ ನಡೆಸಿದ ಪರಿಣಾಮ ಅಪಾರ ಸಾವು-ನೋವು ಆಗಿದ್ದರೂ, ಈ ದೇಶದ ಕೃಷಿ ಸಚಿವ ತೋಮರ್ ಲಾಠಿ ಚಾರ್ಜ್​ನಿಂದ ಯಾವ ರೈತರೂ ಸತ್ತಿಲ್ಲ ಎನ್ನುವ ಬೇಜವಾಬ್ದಾರಿ ಮತ್ತು ನಾಚಿಕೆಗೇಡಿನ ಹೇಳಿಕೆ ನೀಡಿದ್ದಾರೆ. ಬಿಜೆಪಿ ಸರ್ಕಾರದ ಹಠಮಾರಿ ಧೋರಣೆಯಿಂದಲೇ ರೈತರು ಸಾವಿಗೀಡಾದರು ಎಂಬ ಸತ್ಯ ದೇಶದ ಜನತೆಗೆ ಗೊತ್ತಿದೆ ಎಂದು ಮೊಯ್ಲಿ ವಾಗ್ದಾಳಿ ನಡೆಸಿದರು.

ದೇಶದಲ್ಲಿ ನಡೆದ ಉಪ ಚುನಾವಣೆ, ನಂತರದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶದಿಂದ ಕಂಗೆಟ್ಟ ಪ್ರಧಾನಿ ಅವರ ಸಂಸತ್ತು ರೈತರ ಪ್ರತಿಭಟನೆಗೆ ಹೆದರಿ ರಾಜಕೀಯದ ಕಾರಣದಿಂದ ಕಾಯ್ದೆಗಳನ್ನು, ಕೇಸುಗಳನ್ನು ವಾಪಸ್​ ಪಡೆಯಿತೇ ವಿನಃ ರೈತ ಪರ ಕಾಳಜಿಯಿಂದಲ್ಲ ಎಂಬುದನ್ನು ಜನತೆ ಅರಿತಿದ್ದಾರೆ. ವಿಶ್ವದಲ್ಲಿ ಅತ್ಯಂತ ಉತ್ಕೃಷ್ಟ ಪ್ರಜಾಪ್ರಭುತ್ವ ರಾಷ್ಟ್ರವೆಂದು ಹೆಗ್ಗಳಿಕೆಯಿರುವ ಭಾರತದ ಪ್ರಧಾನಿಗೆ, ರೈತರನ್ನು ಅವರಿರುವ ಸ್ಥಳಕ್ಕೆ ಹೋಗಿ ಮಾತನಾಡಿಸುವ ಸಜ್ಜನಿಕೆ ಸಹ ಇಲ್ಲ ಎಂದು ದೂರಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ನಜೀರ್ ಅಹಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಕೇಶವರೆಡ್ಡಿ, ವೀಕ್ಷಕಿ ನಳಿನಿ ರಾಜಣ್ಣ, ಕೆಪಿಸಿಸಿ ಸದಸ್ಯರಾದ ವಿನಯ್ ಶ್ಯಾಮ್, ಮುನೇಗೌಡ, ಮಮತಾಮೂರ್ತಿ, ಮಾಜಿ ಶಾಸಕ ಎಸ್‌.ಎಂ ಮುನಿಯಪ್ಪ, ಸುಮಿತ್ರಮ್ಮ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಮ್, ಡೈರಿ ಗೋಪಿ ಕಿಸಾನ್ ರಾಮಕೃಷ್ಣಪ್ಪ, ಹನುಮಂತಪ್ಪ, ಪಟ್ರೇನಹಳ್ಳಿ ಕೃಷ್ಣ, ನಾರಾಯಣಸ್ವಾಮಿ, ಪ್ರೆಸ್ ಸುರೇಶ್, ಮುದಾಸ್ಸಿರ್, ಸಮೀವುಲ್ಲಾ ಮತ್ತಿತರರು ಇದ್ದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.