ಚಿಕ್ಕಬಳ್ಳಾಪುರ: ಹೇಳಿ ಕೇಳಿ ರಿಂಗ್ ಮಾಸ್ಟರ್, ಸ್ಟೈಲಿಷ್ ಹೆಲ್ತ್ ಮಿನಿಸ್ಟರ್ ಡಾ.ಕೆ.ಸುಧಾಕರ್ ಅವರ ತವರು ಜಿಲ್ಲೆ ಚಿಕ್ಕಬಳ್ಳಾಪುರ, ಮೂರು ಬಾರಿ ಸುಧಾಕರ್ಗೆ ಪುನರ್ಜನ್ಮ ನೀಡಿದ ಕ್ಷೇತ್ರ, ಜನರು ಸುಧಾಕರ್ ಮೇಲೆ ಭರವಸೆಗಳ ಗೋಪುರ ಕಟ್ಟಿಕೊಂಡಿದ್ದಾರೆ. ಅದೇ ಜಿಲ್ಲೆಯಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆ ಮಾಡಲು ಆಸ್ಪತ್ರೆ ಸಿಬ್ಬಂದಿ ಎರಡು ಸಾವಿರಕ್ಕೂ ಅಧಿಕ ಲಂಚವನ್ನು ನೇರವಾಗಿ ಕೇಳುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆಗೆಂದು ಹೋದರೆ ಆಸ್ಪತ್ರೆ ಸಿಬ್ಬಂದಿ ಹೆರಿಗೆ ಮಾಡಿಸಬೇಕಾದರೆ, ಎರಡು ಸಾವಿರ ಲಂಚ ಕೇಳುತ್ತಾರೆ. ಆ ಎರಡು ಸಾವಿರ ಲಂಚ ಕೊಟ್ಟರೂ, ಅದು ಸಾಕಾಗಲ್ಲ ಎಂದು ರೋಗಿ ಮನೆಯವರಿಗೆ ಸಿಬ್ಬಂದಿ ನೇರವಾಗಿಯೇ ಹೇಳುತ್ತಾರಂತೆ. ತುರ್ತು ಚಿಕಿತ್ಸೆಗೆ ಎಂದು ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಿಂದ ಜಿಲ್ಲಾಸ್ಪತ್ರೆಗೆ ರೆಫರ್ ಮಾಡಿ ಆ್ಯಂಬುಲೆನ್ಸ್ನಲ್ಲಿ ಕರೆತಂದ ರೋಗಿಗಳನ್ನು ಎರಡು ಮೂರು ಗಂಟೆ ಕಳೆದರೂ ವೈದ್ಯರು ಲೆಕ್ಕಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಗರ್ಭಿಣಿಯರಿಗೆ ಆಪರೇಷನ್ ಸೇರಿದಂತೆ ಇನ್ನಿತರ ಸೀವಿಯರ್ ಕೇಸ್ಗಳನ್ನು ಅಟೆಂಡ್ ಮಾಡಲು ಆಸ್ಪತ್ರೆ ಸಿಬ್ಬಂದಿ ಹತ್ತು ಸಾವಿರ ಲಂಚ ಪಡೆಯುತ್ತಾರೆ ಎಂಬ ಆರೋಪವೂ ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲೆಯಲ್ಲಿನ ಜಿಲ್ಲಾಸ್ಪತ್ರೆ ಕಥೆ ಹೀಗಾದರೆ ಬೇರೆ ಜಿಲ್ಲೆಗಳಲ್ಲಿರುವ ಆಸ್ಪತ್ರೆಗಳ ಕಥೆ ಕೇಳಂಗೇ ಇಲ್ಲ ಬಿಡಿ, ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಅವರು ತಮ್ಮ ತವರು ಜಿಲ್ಲೆಯನ್ನೇ ನಿರ್ಲಕ್ಷ್ಯ ಮಾಡುತ್ತಿದ್ದಾರೇನೋ, ಇನ್ನಾದರೂ ಸಚಿವರು ಈ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕ್ತರಾ ಇಲ್ಲವೋ ಅನ್ನೊದನ್ನು ಕಾದು ನೋಡಬೇಕು.
ಇದನ್ನೂ ಓದಿ: ಪ್ರೀತಿಯ ನಾಟಕವಾಡಿ ಅಪ್ರಾಪ್ತೆ ಅಪಹರಿಸಿದ್ದವನಿಗೆ 4 ವರ್ಷ ಜೈಲು