ಚಿಕ್ಕಬಳ್ಳಾಪುರ: ಕಳೆದ ವರ್ಷದ ಕೊರೊನಾ ಲಾಕ್ಡೌನ್ನಿಂದಾಗಿ ಮಾರುಕಟ್ಟೆಯಲ್ಲಿ ಹೂಗಳಿಗೆ ಸರಿಯಾಗಿ ಬೆಲೆ ಸಿಗದೆ ಬೆಳೆದ ಎಲ್ಲಾ ಹೂಗಳನ್ನು ರೈತರು ರಸ್ತೆಗೆ ಸುರಿದಿದ್ದರು. ಈ ವರ್ಷ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಹೂಗಳಿಗೆ ಭಾರಿ ಬೇಡಿಕೆ ಬಂದಿದೆ.
ಚಿಕ್ಕಬಳ್ಳಾಪುರದ ಹೂ ಮಾರುಕಟ್ಟೆಯಲ್ಲಿ ದೊಡ್ಡ ದೊಡ್ಡ ಹೂಗಳ ವರ್ತಕರು ಆಗಮಿಸಿ ರೈತರು ಹಾಗೂ ದಲ್ಲಾಳಿಗಳು ಹೇಳಿದ ಬೆಲೆಗೆ ಹೂಗಳನ್ನು ಖರೀದಿ ಮಾಡ್ತಿದ್ದಾರೆ. ಕೆಜಿ ಸೇವಂತಿ ಹೂವಿಗೆ 170 ರೂಪಾಯಿ, ಕೆಜಿ ಗುಲಾಬಿ ಹೂವಿಗೆ 150 ರೂಪಾಯಿ, ಚೆಂಡು ಹೂವಿಗೆ 60 ರೂಪಾಯಿ, ಕಲರ್ ಸೇವಂತಿಗೆಗೆ 180 ರೂಪಾಯಿ ಸೇರಿದಂತೆ ವಿವಿಧ ಹೂಗಳ ಬೆಲೆ ಗಗನಕ್ಕೇರಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಹೂಗಳ ಬೆಲೆ ದುಪ್ಪಟ್ಟಾಗಿದೆ. ದುಬಾರಿ ಬೆಲೆ ತೆತ್ತು ವರ್ತಕರು ಹೂಗಳನ್ನು ಖರೀದಿಸುತ್ತಿದ್ದು, ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಹೂಗಳನ್ನು ಮಾರಾಟ ಮಾಡ್ತಿದ್ದಾರೆ.
ಇದನ್ನೂ ಓದಿ: ಕಲಬುರಗಿಯಲ್ಲಿ ಭಾರಿ ಮಳೆ - ವಿದ್ಯಾರ್ಥಿನಿಯರ ಮೇಲೆ ಕುಸಿದ ಕಟ್ಟಡದ ಮೇಲ್ಛಾವಣಿ