ಚಿಕ್ಕಬಳ್ಳಾಪುರ: ಎಸಿಬಿ ಬೇರೆ ಬೇರೆ ರಾಜ್ಯಗಳಲ್ಲಿಯೂ ಇದೆ. ಹಾಗಾಗಿ ನಮ್ಮ ಸರ್ಕಾರ ರಾಜ್ಯದಲ್ಲಿ ಎಸಿಬಿ ಬೇಕು ಅಂತಾ ಜಾರಿ ಮಾಡಿದ್ವಿ. ಲೋಕಾಯುಕ್ತ ಪ್ರಬಲಗೊಳಿಸಬೇಕೆಂದು ಹೈಕೋರ್ಟ್ ಹೇಳಿರುವುದನ್ನು ನಾವು ಗೌರವಿಸುತ್ತೇವೆ. ನ್ಯಾಯಾಲಯದ ತೀರ್ಪಿಗೆ ನಾವೆಲ್ಲ ಬದ್ಧ ಎಂದು ಚಿಕ್ಕಬಳ್ಳಾಪುರದ ವಿಧುರಾಶ್ವತ್ಥದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಗೌರಿಬಿದನೂರಿನಲ್ಲಿಂದು ಪಕ್ಷ ಬಲಪಡಿಸುವ ದೃಷ್ಟಿಯಿಂದ ಬೃಹತ್ ಮಟ್ಟದ ಪಾದಯಾತ್ರೆ ನಡೆಯಿತು. ನಂತರ ಮಾತನಾಡಿದ ಡಿಕೆಶಿ, ಈಗಾಗಲೇ ಚಿಕ್ಕಬಳ್ಳಾಪುರದಲ್ಲಿ ನಾಲ್ಕು ಕಡೆ ಕಾಂಗ್ರೆಸ್ ಗೆದ್ದಿದೆ. ಈಗ ಮತ್ತೆ ಚಿಂತಾಮಣಿ ಕ್ಷೇತ್ರದಲ್ಲಿ ಗೆಲ್ಲಲಿದೆ ಎಂದರು.