ಚಿಕ್ಕಬಳ್ಳಾಪುರ: ಗುಪ್ತಚರ ವರದಿಗಳ ಪ್ರಕಾರ ಬಿಜೆಪಿ ಈ ಚುನಾವಣೆಯಲ್ಲಿ ಅತೀ ಹೆಚ್ಚಿನ ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಲಿದೆ ಎಂದು ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಭವಿಷ್ಯ ನುಡಿದಿದ್ದಾರೆ.
ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಚಿವರು, ಬಿಜೆಪಿ ಪಕ್ಷ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಈಗಾಗಲೇ ಗುಪ್ತಚರ ವರದಿಗಳು ತಿಳಿಸಿವೆ. ಬಿಜೆಪಿ ಪಕ್ಷವನ್ನು ಸೋಲಿಸಲು ಸಾಕಷ್ಟು ಪಿತೂರಿಗಳು ನಡೆಯುತ್ತಿವೆ. ಆದರೆ, ಆದ್ಯಾವುದೂ ಸಾಧ್ಯವಿಲ್ಲ. ಇನ್ನು, ಕಾರ್ಯಕರ್ತರು ತಳ ಮಟ್ಟದಿಂದ ಶ್ರಮವಹಿಸಬೇಕಾಗಿದೆ ಎಂದು ವ್ಯಂಗ್ಯವಾಡಿದರು.
ಸಾಕಷ್ಟು ಕಾರ್ಯಕರ್ತರು ಕಾಂಗ್ರೆಸ್,ಜೆಡಿಎಸ್ ತೊರೆದು ಬಿಜೆಪಿ ಸೇರಿಕೊಂಡಿದ್ದಾರೆ. ನಮ್ಮ ಪಕ್ಷ ಯಾರಿಗೂ ಅನ್ಯಾಯ ಮಾಡುವುದಿಲ್ಲ. ಎಲ್ಲರೂ ಆ ಪಕ್ಷದಿಂದ ಬಂದವರು, ಈ ಪಕ್ಷದಿಂದ ಬಂದವರು ಎಂದು ಭೇದ ಭಾವ ತೋರದೆ ಪಕ್ಷದ ಗೆಲುವಿಗಾಗಿ ಶ್ರಮಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಂಸದ ಪಿ.ಮೋಹನ್,ವೈ ಎ ನಾರಾಯಣಸ್ವಾಮಿ,ಬೆಳ್ಳಿ ಪ್ರಕಾಶ್,ನಾಗೇಶ್, ಜಿಲ್ಲಾಧ್ಯಕ್ಷ ಮಂಜುನಾಥ್ ಇತರರಿಗೆ ಕ್ಷೇತ್ರದ ಹಲವು ಪಂಚಾಯತ್‌ಗಳ ಉಸ್ತುವಾರಿಗಳನ್ನು ಒಪ್ಪಿಸಿದರು.