ಚಿಕ್ಕಬಳ್ಳಾಪುರ: ವ್ಯಕ್ತಿಯೊಬ್ಬರು ಪಟಾಕಿ ಹೊಡೆದು ಕೈ ಸುಟ್ಟುಕೊಂಡಿರುವ ಘಟನೆ ಗುಡಿಬಂಡೆ ತಾಲೂಕಿನ ದಪ್ಪರ್ತಿಯಲ್ಲಿ ನಡೆದಿದೆ.
ಮೂರ್ತಿ (28) ಕೈ ಸುಟ್ಟುಕೊಂಡವರು, ದೀಪಾವಳಿ ಹಬ್ಬದ ಖಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ರಾತ್ರಿ ಗಾಯಗೊಂಡಿದ್ದಾರೆ. ಮಕ್ಕಳ ಜೊತೆ ಸಂತೋಷವಾಗಿ ಮನೆ ಮುಂದೆ ಆಟೋ ಬಾಂಬ್ ಹೊಡೆಯುವಾಗ ಅದು ಬೇಗ ಸಿಡಿದು ಕೈಗೆ ಗಾಯವಾಗಿದೆ. ಕೈಗೆ ತೀವ್ರ ಗಾಯವಾದ ಹಿನ್ನೆಲೆ ಗುಡಿಬಂಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.
ಈ ಬಾರಿ ಪಟಾಕಿ ಹೊಡೆಯುವವರ ಸಂಖ್ಯೆ ಕಡಿಮೆಯಾಗಿದ್ದರೂ ಅನಾಹುತಗಳಿಗೆ ಮಾತ್ರ ಬ್ರೇಕ್ ಬಿದ್ದಿಲ್ಲ.