ETV Bharat / state

'ಬೇರೆ ದೇಶದಲ್ಲಿ ಕೋವಿಡ್ ಲಸಿಕೆಗೆ 2ರಿಂದ 3 ಸಾವಿರ, ಭಾರತದಲ್ಲಿ 210 ರೂ.ಗೆ ಲಭ್ಯ': ಸುಧಾಕರ್​ - Dr. k .Sudhakar talks about Covid Vaccine price

ಬೇರೆ ದೇಶಗಳಲ್ಲಿ ಎರಡು ಸಾವಿರದಿಂದ ಮೂರು ಸಾವಿರದವರೆಗೂ ಲಸಿಕೆಗೆ ಹಣ‌ ನೀಡಬೇಕಾಗಿದೆ. 135 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಅಲ್ಲೋಲ ಕೊಲ್ಲೋಲ ಆಗಬಾರದೆಂಬ ಕಾರಣಕ್ಕೆ ಕೇವಲ 210 ರೂಪಾಯಿಗೆ ಲಸಿಕೆ ಹಂಚಿಕೆ ಮಾಡಲಾಗುತ್ತಾ ಇದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.

sudhakar
ಡಾ. ಕೆ. ಸುಧಾಕರ್
author img

By

Published : Jan 13, 2021, 10:53 PM IST

ಚಿಕ್ಕಬಳ್ಳಾಪುರ: ಭಾರತಕ್ಕೆ ಕೋವ್ಯಾಕ್ಸಿನ್​ ಹಾಗೂ ಕೋವಿಶೀಲ್ಡ್​ ಲಸಿಕೆ ಎರಡು ಬಂದಿದ್ದು, ಕೇವಲ 210 ರೂಪಾಯಿಗೆ ಲಸಿಕೆ ಸಿಗುತ್ತದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ಆರೋಗ್ಯ ಸಚಿವ ಡಾ. ಕೆ. ಸುಧಾಕರ್

ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೇರೆ ದೇಶಗಳಲ್ಲಿ ಎರಡು ಸಾವಿರದಿಂದ ಮೂರು ಸಾವಿರದವರೆಗೂ ಲಸಿಕೆಗೆ ಹಣ‌ ನೀಡಬೇಕಾಗಿದೆ. 135 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಅಲ್ಲೋಲ ಕೊಲ್ಲೋಲ ಆಗಬಾರದೆಂಬ ಕಾರಣಕ್ಕೆ ಕೇವಲ 210 ರೂಪಾಯಿಗೆ ಲಸಿಕೆ ಹಂಚಿಕೆ ಮಾಡಲಾಗುತ್ತಿದೆ. ಆದರೆ ವಿರೋಧ ಪಕ್ಷಗಳು ಇದರಲ್ಲಿಯೂ ರಾಜಕೀಯ ಮಾಡ್ತಾ ಇದ್ದಾರೆ ಎಂದ ಅವರು, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಬಿಜೆಪಿ ಲಸಿಕೆ ಅಂತ ಹೇಳ್ತಾರೆ, ನಿಜಕ್ಕೂ ಅವರೆಲ್ಲ ರಾಜಕೀಯವಾಗಿ ದಿವಾಳಿ ಆಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಕಾರ್ಯಕ್ರಮಕ್ಕೆ ನೂರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ಕೋವಿಡ್​ ನಿಯಮ ಲೆಕ್ಕಿಸದೆ ನೂಕುನುಗ್ಗಲು ವಾತಾವರಣ ಸೃಷ್ಟಿಸಿದರು.

ಓದಿ: ಅಮಿತ್ ಶಾ ಕಾರ್ಯಕ್ರಮ.. ಭದ್ರತೆ ಹಿನ್ನೆಲೆ ಶಕ್ತಿಸೌಧ ಸಿಬ್ಬಂದಿಗೆ ಶನಿವಾರ ಅರ್ಧ ದಿನ ರಜೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.