ETV Bharat / state

ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಿಂದ ಆರ್ಥಿಕ ಪರಿಸ್ಥಿತಿ ಹಾಳಾಗುವುದಿಲ್ಲ : ಶಾಸಕ ಪ್ರದೀಪ್ ಈಶ್ವರ್

ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಿಂದ ದೇಶಕ್ಕೆ ಶ್ರೀಲಂಕದ ಪರಿಸ್ಥಿತಿ ಎದುರಾಗಲಿದೆ ಎಂದು ಶಾಸಕ ಮೇಲೂರು ರವಿಕುಮಾರ್ ಹೇಳಿಕೆ ನೀಡಿದ್ದರು. ಇದಕ್ಕೆ ಶಾಸಕ ಪ್ರದೀಪ್​ ಈಶ್ವರ್​ ಪ್ರತಿಕ್ರಿಯಿಸಿದ್ದಾರೆ.

ಶಾಸಕ ಪ್ರದೀಪ್ ಈಶ್ವರ್
ಶಾಸಕ ಪ್ರದೀಪ್ ಈಶ್ವರ್
author img

By

Published : Jun 5, 2023, 4:27 PM IST

ಚಿಕ್ಕಬಳ್ಳಾಪುರ : ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದ್ದ ಗ್ಯಾರಂಟಿ ಗಳಿಂದ ದೇಶದ ಆರ್ಥಿಕ ಪರಿಸ್ಥಿತಿ ಹಾಳಾಗಲಿದೆ. ಹಾಗು ದೇಶಕ್ಕೆ ಶ್ರೀಲಂಕದ ಪರಿಸ್ಥಿತಿ ಬರಲಿದೆ ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಪ್ರತಿಕ್ರಿಯಿಸಿದ್ದಾರೆ. ಶಿಡ್ಲಘಟ್ಟ ಕ್ಷೇತ್ರದ ಶಾಸಕ ಮೇಲೂರು ಬಿ ಎನ್​ ರವಿಕುಮಾರ್ ಅವರು ಮೊದಲು ಓದಿಕೊಂಡು ನಂತರ ಮಾತನಾಡಲಿ ಎಂದು ಟಾಂಗ್ ಕೊಟ್ಟಿದ್ದಾರೆ.

ಇಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಚಿಕ್ಕಬಳ್ಳಾಪುರ ಕ್ಷೇತ್ರದ ಅವಲಗುರ್ಕಿ ಬಳಿ ಶಾಸಕ ಪ್ರದೀಪ್ ಈಶ್ವರ್ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಬಳಿಕ ತಾಲೂಕಿನಾದ್ಯಂತ ಸುಮಾರು 15,000 ಗಿಡಗಳನ್ನು ನೆಡುವುದರ ಮೂಲಕ ಪ್ರದೀಪ್ ಈಶ್ವರ್ ದಾಖಲೆ ನಿರ್ಮಿಸಿದ್ದಾರೆ. ಪ್ರತಿಯೊಬ್ಬರೂ ಗಿಡವನ್ನು ನೆಟ್ಟು ಪೋಷಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

ಇದನ್ನೂ ಓದಿ : ಸರ್ಕಾರಿ ಬಸ್​ನಲ್ಲಿ ಉಚಿತ ಪ್ರಯಾಣ ಗ್ಯಾರಂಟಿ ; ಯೋಜನೆಯಿಂದ ವಂಚಿತರಾಗಲಿರುವ ಕರಾವಳಿ ಮಹಿಳೆಯರು

ನಂತರ ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ಮೇಲೂರು ಬಿ ಎನ್​ ರವಿಕುಮಾರ್ ವಿರುದ್ಧ ಕಿಡಿಕಾರಿದರು. ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ಕೊಟ್ಟು ದೇಶವನ್ನು ಶ್ರೀಲಂಕಾದಂತೆ ಆರ್ಥಿಕ ವ್ಯವಸ್ಥೆ ಹಾಳು ಮಾಡುತ್ತಿದೆ ಎಂಬ ಹೇಳಿಕೆ ಕೊಡುವ ಮೊದಲು ರವಿಕುಮಾರ್ ಅವರನ್ನು ಮೊದಲು ಓದಿಕೊಳ್ಳುವುದಕ್ಕೆ ಹೇಳಿ. ಶ್ರೀಲಂಕಾಗೆ ಏಕೆ ಆ ಗತಿ ಬಂತು ಅಂತ ಅಧ್ಯಯನ ಮಾಡುವುದಕ್ಕೆ ಹೇಳಿ ಎಂದು ತಿರುಗೇಟು ಕೊಟ್ಟರು.

ಶ್ರೀಲಂಕಾ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಬೀದಿಗೆ ಬರಲು ಹಲವು ಕಾರಣಗಳಿವೆ. ಸಾಕಷ್ಟು ದೇಶಗಳು ಶ್ರೀಲಂಕಾವನ್ನು ಬೀದಿಗೆ ತರಲು ಪ್ರಯತ್ನಿಸಿದ್ದವು. ಇದರ ಹಿನ್ನೆಲೆ ಶ್ರೀಲಂಕಾ ದೇಶಕ್ಕೆ ಆ ಸ್ಥಿತಿ ಬಂದುಹೋಗಿದೆ. ಇನ್ನು, ಕೇಂದ್ರದ ಬಿಜೆಪಿ ಸರ್ಕಾರ ಉದ್ಯಮಿಗಳ 2 ಲಕ್ಷ ಕೋಟಿ ಟ್ಯಾಕ್ಸ್ ಮನ್ನಾ ಮಾಡಿದರು. ಆಗ ದೇಶದ ಅರ್ಥ ವ್ಯವಸ್ಥೆ ಏನು ಆಗಲಿಲ್ಲವಾ ಎಂದು ಶಾಸಕ ಪ್ರದೀಪ್ ಈಶ್ವರ್ ಪ್ರಶ್ನಿಸಿದರು.

ಇದನ್ನೂ ಓದಿ : ಗೋವುಗಳನ್ನು ಏಕೆ ಕಡಿಯಬಾರದು; ಪಶು ಸಂಗೋಪನಾ ಸಚಿವರ ಹೇಳಿಕೆ ಖಂಡನೀಯ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಇನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಪಕ್ಷದ ಸರ್ಕಾರ ಬಡವರಿಗೆ ಅಕ್ಕಿ, ಹಣವನ್ನು ಕೊಡುತ್ತಿದ್ದು, ಅದಕ್ಕಾಗಿ 50 ಸಾವಿರ ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಇದರಿಂದ ಯಾವುದೇ ಆರ್ಥಿಕ ವ್ಯವಸ್ಥೆ ಹಾಳಾಗುವುದಿಲ್ಲ. ಮತ್ತೊಂದೆಡೆ ಬಿಜೆಪಿ ಪಾಲಿಸಿಗಳು ಅದಾನಿ, ಅಂಬಾನಿಗಳಿಗೆ ಮಾತ್ರ ಸೀಮಿತವಾಗಿವೆ. ಹೀಗಾಗಿ ರವಿಕುಮಾರ್ ಅರಿತುಕೊಂಡು ಬಳಿಕ ಮಾತನಾಡಲಿ. ಅವರ ಮೇಲೆ ನಮಗೆ ಗೌರವ ಇದೆ ಎಂದು ಪ್ರದೀಪ್ ಈಶ್ವರ್ ಹೇಳಿದರು.

ಇದನ್ನೂ ಓದಿ : ಪ್ರೀತಿಗೂ ರೆಡಿ, ಸಂಘರ್ಷಕ್ಕೂ ರೆಡಿ, ನನಗೆ ದ್ವೇಷದ ರಾಜಕೀಯ ಬೇಕಿಲ್ಲ: ಡಿಸಿಎಂ ಡಿ ಕೆ ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.