ಚಿಕ್ಕಬಳ್ಳಾಪುರ: ಕಾಂಗ್ರೆಸ್ನವರಿಗೆ ಮಾಡೋಕೆ ಬೇರೆ ಕೆಲಸ ಇಲ್ಲ. ಹಾಗಾಗಿ ಬಿಜೆಪಿಯವರನ್ನು ಬೈದುಕೊಂಡು ಓಡಾಡುವುದೇ ಅವರ ಕೆಲಸವಾಗಿದೆ. ನಾವು ರಾಜ್ಯದ ಅಭಿವೃದ್ಧಿ, ರೈತಪರ ಕೆಲಸಗಳಲ್ಲಿ ಬ್ಯುಸಿಯಾಗಿರುತ್ತೇವೆ. ಬಿಜೆಪಿ ಪಕ್ಷವನ್ನು ಬೈದ್ರೆ, ಮತಗಳನ್ನು ಪಡೆದು ಆಡಳಿತಕ್ಕೆ ಬರಬಹುದು ಎಂಬ ಭ್ರಮೆಯಲ್ಲಿದ್ದಾರೆ. ಇದು ಅವರ ಮೂರ್ಖತನದ ಪರಮಾವಧಿ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಇದೇ ವೇಳೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ದೇವೇಗೌಡರು ಎತ್ತಿನಹೊಳೆ ಯೋಜನೆ ನೀರು ಬರೋದು ಅನುಮಾನ ಎಂಬ ಬಗ್ಗೆ ಮಾತನಾಡಿದ್ದಾರೆ. ಎತ್ತಿನಹೊಳೆ ನೀರು ಬರುವ ವಿಶ್ವಾಸ ನನಗಿದೆ. ಮುಖ್ಯಮಂತ್ರಿಗಳಿಗೆ ಇದರ ಬಗ್ಗೆ ಆಳವಾದ ಜ್ಞಾನ ಇದೆ. ಅವರೇ ಈ ಯೋಜನೆಗೆ ಅನುಮೋದನೆ ನೀಡಿದ್ದು, ಎರಡು ವರ್ಷಗಳಲ್ಲಿ ನೀರು ಹರಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆಂದು ಹೇಳಿದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಮಳೆ ಅವಾಂತರ ; ಗಾಳಿಗೆ ಮರಬಿದ್ದು 50 ಬೈಕ್ ಜಖಂ,ಇಬ್ಬರಿಗೆ ಗಾಯ