ETV Bharat / state

ಚಿಕ್ಕಬಳ್ಳಾಪುರ ಉಪಚುನಾವಣೆ ರಣಕಣ... ಮತದಾರರ ನಿಷ್ಠೆ ಪಕ್ಷಕ್ಕೋ, ನಾಯಕನಿಗೋ..? - ಚಿಕ್ಕಬಳ್ಳಾಪುರ ಉಪ ಚುನಾವಣೆ ಸುದ್ದಿ

ಚಿಕ್ಕಬಳ್ಳಾಪುರ ಕ್ಷೇತ್ರ ಚುನಾವಣೆ ಅಂದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಅಖಾಡವಾಗಿತ್ತು, ಆದರೆ ಈಗೀನ ರಾಜಕೀಯ ಲೆಕ್ಕಚಾರಗಳಿಂದ ಅದು ತಲೆಕೆಳಗಾಗಿದ್ದು, ಕಾಂಗ್ರೆಸ್ ಪಕ್ಷದಿಂದಲೂ ಅಭ್ಯರ್ಥಿಯನ್ನು ಘೋಷಿಸಿದ್ದು, ಜೆಡಿಎಸ್ ಪಕ್ಷದಲ್ಲೂ ಅಭ್ಯರ್ಥಿಯನ್ನು ಪೈನಲ್ ಮಾಡಲಾಗಿದೆ. ಸದ್ಯ ಅನರ್ಹ ಶಾಸಕ ಸುಧಾಕರ್ ಬಿಜೆಪಿ ಪಕ್ಷಕ್ಕೆ ಸೆರ್ಪಡೆಗೊಂಡಿದ್ದು, ಕ್ಷೇತ್ರದ ಜನ ಯಾರ ಕೈ ಹಿಡಿಯುತ್ತಾರೆ ಎಂಬುವುದು ಪ್ರಶ್ನೆಯಾಗಿದೆ.

ಚಿಕ್ಕಬಳ್ಳಾಪುರ ಉಪಚುನಾವಣೆ
author img

By

Published : Nov 15, 2019, 1:54 AM IST

ಚಿಕ್ಕಬಳ್ಳಾಪುರ : ಜೆಡಿಎಸ್​​- ಕಾಂಗ್ರೆಸ್​ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣರಾದವರಲ್ಲಿ ಅನರ್ಹ ಶಾಸಕ ಸುಧಾಕರ್ ಕೂಡ ಒಬ್ಬರು. ಇವರ ರಾಜೀನಾಮೆಯಿಂದ ತೆರವಾದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಮತದಾರರ ನಿಷ್ಠೆ ಪಕ್ಷಕ್ಕೋ ಅಥವಾ ನಾಯಕನಿಗೋ ಎಂಬುದು ಪ್ರಶ್ನೆಯಾಗಿ ಉಳಿದಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್​​ ತಮ್ಮ ಅಭ್ಯರ್ಥಿಗಳ ಹೆಸರನ್ನು ಘೋಷಿಸಿವೆ. ಸದ್ಯ ಅನರ್ಹ ಶಾಸಕ ಸುಧಾಕರ್ ಅವರು ಬಿಜೆಪಿ ಸೇರ್ಪಡೆಗೊಂಡಿದ್ದು, ಉಪಚುನಾವಣೆಯಲ್ಲಿ ಮತದಾರರು ಯಾರ ಕೈ ಹಿಡಿಯುತ್ತಾರೆ ಎಂಬುವುದು ದೊಡ್ಡ ಪ್ರಶ್ನೆಯಾಗಿದೆ. ಈ ಹಿಂದೆ ಚಿಕ್ಕಬಳ್ಳಾಪುರ ಕ್ಷೇತ್ರದ ಚುನಾವಣೆ ಎಂದರೆ ಕಾಂಗ್ರೆಸ್ ಹಾಗೂ ಜೆಡಿಎಸ್​ನ ಅಖಾಡವಾಗಿತ್ತು. ಪ್ರಸ್ತುತ ರಾಜಕೀಯ ಲೆಕ್ಕಚಾರಗಳು ಏರುಪೇರಾಗಿದ್ದು, ಈ ಹಿಂದಿನಂತಹ ಫಲಿತಾಂಶ ಮತ್ತೆ ಕಾಣಿಸುವುದಿಲ್ಲ.

ಕಾಂಗ್ರೆಸ್​ನಿಂದ ನಂದಿ ಆಂಜನಪ್ಪ ಹಾಗೂ ಜೆಡಿಎಸ್​ನಿಂದ ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ ಸ್ಪರ್ಧಿಸುತ್ತಿದ್ದರೇ ಬಿಜೆಪಿಯಿಂದ ಅನರ್ಹ ಶಾಸಕ ಸುಧಾಕರ್, ಬಿಎಸ್​ಪಿಯಿಂದ ನಾರಾಯಣ ಸ್ವಾಮಿ ಕಣಕ್ಕೆ ಇಳಿಯಲಿದ್ದಾರೆ. ಈ ಉಪಚುನಾವಣೆಯಲ್ಲಿ ವಿಜಯಲಕ್ಷ್ಮಿ ಯಾರಿಗೆ ಒಲಿಯಲ್ಲಿದ್ದಾಳೆ ಎಂಬ ಕುತೂಹಲ ಜನರಲ್ಲಿ ಮೂಡಿದೆ.

ಸದ್ಯದ ರಾಜಕಾರಣದಲ್ಲಿ ಜಿಲ್ಲೆಯ ರಾಜಕೀಯ ಪರಿಸ್ಥಿತಿಗಳು ಅದಲು-ಬದಲಾಗಿದ್ದು, ಮತದಾರನ್ನು ಪಕ್ಷ ನಿಷ್ಠೆ ತೋರಿಸುತ್ತಾನೋ ಅಥವಾ ವ್ಯಕ್ತಿ ನಿಷ್ಠೆ ಪ್ರದರ್ಶಿಸುತ್ತಾನೋ ಎಂಬುದು ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ.

ಕಳೆದ ಬಾರೀ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಂಜುನಾಥ್ ಅವರು, 'ವ್ಯಕ್ತಿಗಿಂತ ನನಗೆ ಪಕ್ಷ ಬಹಳ ಮುಖ್ಯವಾಗಿದೆ. ಈ ಬಾರಿ ಉಪಚುನಾವಣೆಯಲ್ಲಿ ಪಕ್ಷಕ್ಕಾಗಿ ದುಡಿಯುತ್ತೇನೆ. ಬಿಜೆಪಿ ಇಂದು ಅಧಿಕಾರದಲ್ಲಿ ಇರಲು ಅನರ್ಹ ಶಾಸಕರೇ ಮುಖ್ಯ ಕಾರಣ. ಈಗ ಅವರೆಲ್ಲ ಬಿಜೆಪಿ ಸೇರಿಕೊಂಡಿದ್ದು, ಅವರ ಋಣವನ್ನು ನಾವು ತೀರಿಸಬೇಕಾಗಿದೆ' ಎಂದು 'ಈಟಿವಿ ಭಾರತ್​ಗೆ ತಿಳಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್​​ನಿಂದ ಗೆದ್ದು ಶಾಸಕರಾದ ಸುಧಾಕರ್ ಅವರು ಬಳಿಕ ನೀಡಿದ ರಾಜೀನಾಮೆಯಿಂದ ಅನರ್ಹರಾದರು. ಈಗ ಬಿಜೆಪಿ ಸೇರ್ಪಡೆಗೊಂಡ ಹಿನ್ನಲೆಯಲ್ಲಿ ಕಾಂಗ್ರೆಸ್​ನ ಕೆಲ ಕಾರ್ಯಕರ್ತರು, ಮುಖಂಡರು ಹಿಬ್ಬಾಗವಾಗಿದ್ದಾರೆ. ಈ ಬಾರಿಯ ಉಪಚುನಾವಣೆಯು ತ್ರಿಕೋನ ಸ್ಪರ್ಧೆ ಏರ್ಪಡಲಿದ್ದು, ಚಿಕ್ಕಬಳ್ಳಾಪುರ ಕ್ಷೇತ್ರ ಯಾರ ಮಡಲಿಗೆ ಒಲಿಯಲಿದೆ ಎಂಬುವುದನ್ನು ಕಾದು ನೋಡಬೇಕಿದೆ.

Intro:ಸಮ್ಮಿಶ್ರ ಸರ್ಕಾರಕ್ಕೆ ದೊಡ್ಡ ಶಾಕ್ ಕೊಟ್ಟು ಸರ್ಕಾರದ ಪತನಕ್ಕೆ ಕಾರಣರಾದವರಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರು ಒಬ್ಬರು ಎಂದರೆ ತಪ್ಪಾಗಲಾರದು.ಆದರೆ ಈಗ ಚಿಕ್ಕಬಳ್ಳಾಪುರ ಮತದಾರರು ಹಿಬ್ಬಾಗವಾಗಿದ್ದು ವಸ್ತುನಿಷ್ಟೆಯನ್ನು ತೋರಿಸುತ್ತಾರಾ ಅಥವಾ ಪಕ್ಷನಿಷ್ಠೆಯನ್ನು ತೋರಿಸುತ್ತಾರಾ ಎಂಬುವುದು ಪ್ರಶ್ನೆಯಾಗಿದೆ.

ಒಂದು ಕಡೆ ಕಾಂಗ್ರೆಸ್ ಪಕ್ಷದಿಂದಲೂ ಅಭ್ಯರ್ಥಿಯನ್ನು ಘೋಷಿಸಿದ್ದು,ಜೆಡಿಎಸ್ ಪಕ್ಷದಲ್ಲೂ ಅಭ್ಯರ್ಥಿಯನ್ನು ಪೈನಲ್ ಮಾಡಲಾಗಿದೆ.ಸದ್ಯ ಚಿಕ್ಕಬಳ್ಳಾಪುರದ ಅನರ್ಹ ಶಾಸಕ ಸುಧಾಕರ್ ಇಂದು ಬಿಜೆಪಿ ಪಕ್ಷಕ್ಕೆ ಸೆರ್ಪಡೆಗೊಂಡಿದ್ದು ಕ್ಷೇತ್ರದ ಜನ ಯಾರ ಕೈ ಹಿಡಿಯುತ್ತಾರೆ ಎಂಬುವುದು ಪ್ರಶ್ನೆಯಾಗಿದೆ.

Body:ಚಿಕ್ಕಬಳ್ಳಾಪುರ ಕ್ಷೇತ್ರವೆಂದರೇ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಬಿಗ್ ಪೈಟ್ ನಡೆಯುತ್ತೆ ಎಂಬುವುದರಲ್ಲಿ ಬೇರೊಂದು ಮಾತ್ತಿಲ್ಲಾ.ಆದರೆ ಈಗೀನ ರಾಜಕೀಯ ಲೆಕ್ಕಚಾರಗಳು ತಲೆಕೆಳಗಾಗಿ ಬಿಟ್ಟಿವೆ.

ಕಾಂಗ್ರೆಸ್ ಪಕ್ಷದಿಂದ ನಂದಿ ಆಂಜನಪ್ಪ ಸ್ಪರ್ಧಿಸುತ್ತಿದ್ದರೆ,ಜೆಡಿಎಸ್ ಪಕ್ಷದಿಂದ ಮಾಜಿ ಶಾಸಕ ಬಚ್ಚೇಗೌಡ ,ಬಿಜೆಪಿ ಪಕ್ಷದಿಂದ ಅನರ್ಹ ಶಾಸಕ ಡಾ ಕೆ ಸುಧಾಕರ್ ,ಬಿಎಸ್ಪಿ ಅಭ್ಯರ್ಥಿಯಾಗಿ ನಾರಾಯಣ ಸ್ವಾಮಿ ವಿಧಾನಸಭಾ ಕಣಕ್ಕೆ ಇಳಿದಿದ್ದು ಯಾರ ಕೊರಳಿಗೆ ವಿಜಯ ಮಾಲೆ ಬಿಳಲಿದೆ ಎಂಬುವುದು ಸದ್ಯದ ಮಟ್ಟಿಗೆ ಪಶ್ನೆಯಾಗಿದೆ.

ಸದ್ಯ ಜಿಲ್ಲೆಯ ರಾಜಕೀಯ ಪರಿಸ್ಥಿತಿಗಳು ಅದಲುಬದಲಾಗಿದ್ದು ಚಿಕ್ಕಬಳ್ಳಾಪುರದ ಜನತೆ ಪಕ್ಷನಿಷ್ಠೆಯನ್ನು ತೋರಿಸುತ್ತಾರೋ ಅಥವಾ ವ್ಯಕ್ತಿ ನಿಷ್ಠೆಯನ್ನು ತೋರಿಸುತ್ತಾರೋ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ.

ಇನ್ನೂ ಕಳೆದ ಬಾರೀ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಮಂಜುನಾಥ್ ನನಗೆ ವ್ಯಕ್ತಿಗಿಂತ ಪಕ್ಷ ಬಹಳ ಮುಖ್ಯವಾಗಿದ್ದು ಈ ಬಾರೀಯ ಉಪಚುನಾವಣೆಯಲ್ಲಿ ಪಕ್ಷಕ್ಕಾಗಿ ದುಡಿಯುವುದಾಗಿ ಹೇಳಿಕೆ ನೀಡಿದ್ದಾರೆ. ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಮುಖ್ಯ ಕಾರಣ ಅನರ್ಹ ಶಾಸಕರು ಈಗ ಅವರು ಬಿಜೆಪಿ ಪಕ್ಷಕ್ಕೆ ಸೇರಿಕೊಂಡಿದ್ದು ಈಗ ಅವರ ಋಣವನ್ನು ತೀರಿಸಬೇಕಾಗಿದೆ ಎಂದು ಈಟಿವಿ ಭಾರತ್ ಗೆ ಸ್ಪಷ್ಟ ಪಡಿಸಿದ್ದಾರೆ.

ಮತ್ತೊಂದು ಕಡೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಶಾಸಕರಾಗಿದ್ದ ಡಾ ಕೆ ಸುಧಾಕರ್ ಅನರ್ಹರಾದ ಬಳಿಕ ಬಿಜೆಪಿ ಪಕ್ಷ ಸೇರ್ಪಡೆಗೊಂಡ ಹಿನ್ನಲೇ ಕಾಂಗ್ರೆಸ್ ಪಕ್ಷದ ಮುಖಂಡರು ಹಿಬ್ಬಾಗವಾಗಿದ್ದು ಕೆಲವರು ಪಕ್ಷನಿಷ್ಟೆಯನ್ನು ತೋರಿಸಿದರೆ ಇನ್ನೂ ಕೆಲವರು ವ್ಯಕ್ತಿನಿಷ್ಠೆಯನ್ನು ತೋರಿ ವಿಭಜನೆಗೊಂಡಿದ್ದಾರೆ.

ಒಟ್ಟಾರೆ ಚಿಕ್ಕಬಳ್ಳಾಪುರ ಉಪಚುನಾವಣೆಯಲ್ಲಿ ಈ ಬಾರೀ ತ್ರೀಕೋನ ಸ್ಪರ್ಧೆ ಏರ್ಪಡಲಿದ್ದು ಯಾರ ಮಡಲಿಗೆ ಚಿಕ್ಕಬಳ್ಳಾಪುರ ಕ್ಷೇತ್ರ ವಲಿಯಲಿದೆ ಎಂಬುವುದನ್ನು ಪಲಿತಾಂಶದವರೆಗೂ ಕಾಯಬೇಕಾಗಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.