ಚಿಂತಾಮಣಿ: ತಾಲೂಕಾ ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ನಡೆದ ಸಾಮಾನ್ಯ ಚುನಾವಣೆಯಲ್ಲಿ ಮಾಜಿ ಶಾಸಕ ಡಾ. ಎಂ ಸಿ ಸುಧಾಕರ್ ಬೆಂಬಲಿಗರು ಜಯ ಗಳಿಸಿದ್ದಾರೆ.
ಹದಿನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಎ ವರ್ಗದ ಸದಸ್ಯರಿಗೆ ನಾಲ್ಕು ಸ್ಥಾನ ಬಿ ವರ್ಗದ ಸದಸ್ಯರಿಗೆ ಹತ್ತು ಸ್ಥಾನಗಳು ನಿಗದಿಯಾಗಿತ್ತು. ಎ ವರ್ಗದ ನಾಲ್ಕು ಸ್ಥಾನಗಳಿಗೆ ಮಾಜಿ ಶಾಸಕ ಸುಧಾಕರ್ ಬೆಂಬಲಿಗರು ಅವಿರೋಧವಾಗಿ ಆಯ್ಕೆಯಾಗಿದ್ದರು. ಬಿ ವರ್ಗದ 10 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ ಹತ್ತು ಸ್ಥಾನಗಳಲ್ಲಿ ಶಾಸಕ ಸುಧಾಕರ್ ಬೆಂಬಲಿಗರು ಗೆಲ್ಲುವುದರ ಮೂಲಕ ಟಿಎಪಿಸಿಎಂಎಸ್ನ ಆಡಳಿತವನ್ನ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಜೆಡಿಎಸ್ನ ಯಾವೊಬ್ಬ ಅಭ್ಯರ್ಥಿಯೂ ಕೂಡ ಗೆಲ್ಲಲು ಸಾಧ್ಯವಾಗಿಲ್ಲ.