ಚಿಂತಾಮಣಿ: ನಗರಸಭೆ, ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ, ಅಧ್ಯಕ್ಷರಾಗಿ ರೇಖಾ ಉಮೇಶ್ ಮತ್ತು ಉಪಾಧ್ಯಕ್ಷರಾಗಿ ಸುಹಾಸಿನಿ ಆಯ್ಕೆಯಾಗಿದ್ದಾರೆ.
ರೇಖಾ ಉಮೇಶ್ ಮತ್ತು ಸುಹಾಸಿನಿ ತಲಾ 17 ಮತ ಗಳಿಸಿದರು. ಮಾಜಿ ಶಾಸಕರ ಪರ ಸದಸ್ಯರಿಂದ 14 ಮತ್ತು ಪಕ್ಷೇತರ ಅಭ್ಯರ್ಥಿಯಿಂದ ಜೆಡಿಎಸ್ ಪಕ್ಷದ ನಗರಸಭಾ ಸದಸ್ಯ ಮಹಮ್ಮದ್ ಶಫಿಕ್ ಮಾಜಿ ಶಾಸಕರ ಬೆಂಬಲಿಗರ ಪರವಾಗಿ ಮತವನ್ನು ಚಲಾಯಿಸಿದ್ದು ಸಾಕಷ್ಟು ಪರ-ವಿರೋಧಗಳು ವ್ಯಕ್ತವಾಗಿದ್ದವು.
ಈ ಕುರಿತು ಜೆಡಿಎಸ್ ಹಾಗೂ ಸ್ಥಳೀಯ ಶಾಸಕ ಅಸಮಾಧಾನ ವ್ಯಕ್ತಪಡಿಸಿದ್ದು, ಲಕ್ಷಾಂತರ ರೂಪಾಯಿಗೆ ರಫಿಕ್ ಮಾರಾಟರಾಗಿದ್ದಾರೆಂದು ಅರೋಪ ಮಾಡಿದ್ದರು. ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿ ರಘುನಂದನ್ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಡಿವೈಎಸ್ಪಿ ವಿ ಲಕ್ಷ್ಮಯ್ಯ ಅವರ ನೇತೃತ್ವದಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.