ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹೊಸದಾಗಿ 106 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 14643ಕ್ಕೆ ಏರಿಕೆ ಕಂಡಿದೆ.
ಇಂದು ಬಿಡುಗಡೆ ಮಾಡಿರುವ ವರದಿಯಲ್ಲಿ 11 ಜನರು ಸಂಪೂರ್ಣವಾಗಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಒಟ್ಟು ಬಿಡುಗಡೆ ಹೊಂದಿರುವವರ ಸಂಖ್ಯೆ 13997ಕ್ಕೆ ಏರಿಕೆ ಕಂಡಿದೆ.
![chikkaballapura corona update](https://etvbharatimages.akamaized.net/etvbharat/prod-images/kn-ckb-02-corona-cases-av-kac10004_13042021174806_1304f_1618316286_775.jpg)
ಇಂದು ಚಿಕ್ಕಬಳ್ಳಾಪುರದಲ್ಲಿ 26, ಬಾಗೇಪಲ್ಲಿಯಲ್ಲಿ 5, ಚಿಂತಾಮಣಿಯಲ್ಲಿ 39, ಗೌರಿಬಿದನೂರಿನಲ್ಲಿ 24, ಗುಡಿಬಂಡೆಯಲ್ಲಿ 4 ಹಾಗೂ ಶಿಡ್ಲಘಟ್ಟದಲ್ಲಿ 8 ಪ್ರಕರಣಗಳು ಪತ್ತೆಯಾಗಿವೆ.
ಇಂದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಈವರೆಗೆ ಒಟ್ಟು 120 ಮಂದಿ ಸಾವನ್ನಪ್ಪಿದ್ದಾರೆ.