ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲೂಕಿನ ವಲಸೇನಹಳ್ಳಿ ಗ್ರಾಮದ ಅಂಗನವಾಡಿಯಲ್ಲಿ ಗಂಭೀರ ಸಮಸ್ಯೆಯೊಂದು ಉದ್ಭವಿಸಿದೆ. ಈ ಹಿಂದೆ ಇದ್ದ ಶಿಕ್ಷಕಿ ಮಂಜುಳ ಸಾವನ್ನಪ್ಪಿದ್ದಾರೆ. ಹೀಗಾಗಿ ಖಾಲಿ ಇದ್ದ ಸ್ಥಾನಕ್ಕೆ ದನಮಿಟ್ಟೇನಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದ ಅಂಗನವಾಡಿ ಶಿಕ್ಷಕಿ ಬಿ.ರಾಧಾ ವರ್ಗಾವಣೆಯಾಗಿ ಬಂದಿದ್ದಾರೆ. ಆದರೆ ಈ ಶಿಕ್ಷಕಿ ನಮಗೆ ಬೇಡ, ನಮ್ಮ ಗ್ರಾಮದವರೇ ಶಿಕ್ಷಕಿಯಾಗಿ ಬರಬೇಕು. ಅಲ್ಲಿಯವರೆಗೂ ನಾವು ಮಕ್ಕಳನ್ನು ಅಂಗನವಾಡಿಗೆ ಕಳುಹಿಸುವುದಿಲ್ಲ ಎಂದು ಗ್ರಾಮಸ್ಥರು ಹಠ ಹಿಡಿದಿದ್ದಾರೆ.
"ನಾನು ಇಲ್ಲಿಂದ ಹೋಗಲು ಸಿದ್ಧಳಿದ್ದೇನೆ. ಆದರೆ ಅಧಿಕಾರಿಗಳು ಕ್ರಮ ತೆಗೆದುಕೊಂಡಿಲ್ಲ" ಎಂದು ಶಿಕ್ಷಕಿ ಹೇಳುತ್ತಾರೆ. ಈ ವಿಚಾರವಾಗಿ ಶಿಕ್ಷಕಿಗಿಗೂ ಗ್ರಾಮಸ್ಥರಿಗೂ ಜಟಾಪಟಿಯಾಗಿ ಪ್ರಕರಣ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಶಿಕ್ಷಕಿ ಗ್ರಾಮಸ್ಥರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಮುರಿದ ಮರದ ಸೇತುವೆ ಮೇಲೆ ನಿಂತು ಮೂಕರೋದನೆ.. ನೆರವಿಗೆ ಕಾಯುತ್ತಿದೆ 'ಶ್ವಾನ'
ಶಿಕ್ಷಕಿ ಮೇಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಅವರು ನಮ್ಮ ಊರಿನಲ್ಲಿ ಇರೋವರೆಗೂ ನಮ್ಮ ಮಕ್ಕಳನ್ನು ಅಂಗನವಾಡಿಗೆ ಕಳಿಸುವುದಿಲ್ಲ ಎಂದು ಹೇಳಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಶೀಘ್ರ ಕ್ರಮಕ್ಕೆ ಮುಂದಾಗಬೇಕಿದೆ.