ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇಂದು ಒಂದೇ ದಿನದಲ್ಲಿ ಬರೋಬ್ಬರಿ 234 ಮಂದಿ ಕೊರೊನಾ ಸೋಂಕಿಗೀಡಾಗಿದ್ದು, 15 ಸೋಂಕಿತರು ಮಾತ್ರವೇ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ 91 ಮಂದಿ, ಬಾಗೇಪಲ್ಲಿಯಲ್ಲಿ 27 ಮಂದಿ, ಚಿಂತಾಮಣಿಯಲ್ಲಿ 23 ಮಂದಿ, ಗೌರಿಬಿದನೂರಿನಲ್ಲಿ 61 ಮಂದಿ, ಗುಡಿಬಂಡೆಯಲ್ಲಿ 12 ಮಂದಿ, ಶಿಡ್ಲಘಟ್ಟದಲ್ಲಿ 20 ಸೋಂಕಿತರು ಧೃಡಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7,840 ಕ್ಕೆ ಏರಿಕೆಯಾಗಿದೆ.
ಇನ್ನೂ ಗೌರಿಬಿದನೂರಿನಲ್ಲಿ 9, ಚಿಂತಾಮಣಿಯಲ್ಲಿ 3, ಗುಡಿಬಂಡೆಯಲ್ಲಿ 3 ಸೋಂಕಿತರು ಸಂಪೂರ್ಣ ಗುಣಮುಖಗೊಂಡು ಬಿಡುಗಡೆಗೊಂಡಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 5,866 ಕ್ಕೆ ಏರಿಕೆಯಾಗಿದೆ.