ETV Bharat / state

ನಿಲ್ಲದ ದ್ರಾಕ್ಷಿ ಬೆಳೆಗಾರರ ಸಂಕಷ್ಟ: ಕೈಗೆ ಬಂದ ತುತ್ತು ಬಾಯಿಗೆ ಬರುವಷ್ಟರಲ್ಲಿ ಕುಸಿದ ಬೆಲೆ - Chikkaballapur grape Growers in loss

ಚಿಕ್ಕಬಳ್ಳಾಫುರ ಜಿಲ್ಲೆಯ ರೈತರು ವಿನೂತನ ಮಾದರಿಯಲ್ಲಿ ಹನಿ ನೀರಾವರಿ ನಂಬಿಕೊಂಡು ಜಿಲ್ಲೆಯಾದ್ಯಂತ 9,375 ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆದಿದ್ದಾರೆ. ಉತ್ತಮ ಫಸಲು ಸಹ ಬಂದಿದ್ದು, ಇನ್ನೇನು ದ್ರಾಕ್ಷಿ ಕಟಾವು​ ಮಾಡಿ ಮಾರುಕಟ್ಟೆಗೆ ಹಾಕಬೇಕು ಎನ್ನುವಾಗ ದಿಢೀರ್​ ಬೆಲೆ ಕುಸಿದಿದೆ.

ದ್ರಾಕ್ಷಿ ಬೆಳೆಗಾರರ ಸಮಸ್ಯೆ
ದ್ರಾಕ್ಷಿ ಬೆಳೆಗಾರರ ಸಮಸ್ಯೆ
author img

By

Published : May 16, 2022, 10:53 AM IST

Updated : May 16, 2022, 12:45 PM IST

ಚಿಕ್ಕಬಳ್ಳಾಪುರ: ಜಿಲ್ಲೆಯ ರೈತರು ತರಕಾರಿ, ಹಣ್ಣು ಹಂಪಲು ಸೇರಿದಂತೆ ದ್ರಾಕ್ಷಿ ಬೆಳೆ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕಳೆದ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಸುರಿದ ಮಹಾಮಳೆಯ ಹೊಡೆತದಿಂದ ಸುಧಾರಿಸಿಕೊಳ್ಳಲು ಇನ್ನೂ ಆಗಿಲ್ಲ, ಅಂಥದ್ರಲ್ಲಿ ಹಗಲು ರಾತ್ರಿ ಕಷ್ಟಪಟ್ಟು ಉತ್ತಮ ತಳಿಯ ದ್ರಾಕ್ಷಿ ಬೆಳೆದು ಇನ್ನೇನು ಕಟಾವು ಮಾಡಿ ಮಾರುಕಟ್ಟೆಗೆ ಕೊಂಡೊಯ್ಯಬೇಕು ಎನ್ನುವಷ್ಟರಲ್ಲಿ ಇದ್ದಕ್ಕಿದ್ದಂತೆ ಬೆಲೆ ಕುಸಿದಿದೆ. ಇದರಿಂದ ಕಂಗಾಲಾದ ರೈತರು ಮಾಡಿದ ಬೆಳೆ ಸಾಲ ತೀರಿಸೋದು ಹೇಗೆ ಎಂದು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ವಿನೂತನ ಮಾದರಿಯಲ್ಲಿ ಹನಿ ನೀರಾವರಿ ನಂಬಿಕೊಂಡು ಜಿಲ್ಲೆಯಾದ್ಯಂತ 9,375 ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆದಿದ್ದಾರೆ. ಉತ್ತಮ ಫಸಲು ಸಹ ಬಂದಿದ್ದು, ಕಟಾವು​ ಮಾಡಿ ಮಾರುಕಟ್ಟೆಗೆ ಹಾಕಬೇಕು ಎನ್ನುವಾಗ ದಿಢೀರ್​ ಬೆಲೆ ಕುಸಿದಿದೆ. ಕೆ.ಜಿ ದಿಲ್ ಖುಷ್ ದ್ರಾಕ್ಷಿ ಕೇವಲ 15 ರೂಪಾಯಿಯಿಂದ 20 ರೂಪಾಯಿಗೆ ಮಾತ್ರ ಮಾರಾಟವಾಗ್ತಿದೆ. ದುಬಾರಿ ನಿರ್ವಾಹಣೆಗೆ ಹೆಸರುವಾಸಿಯಾಗಿರುವ ಶರತ್, ರೆಡ್ ಗ್ಲೋಬ್, ಸುಪರ್ ಸೋನಾಲಿಕಾ ದ್ರಾಕ್ಷಿಗೂ ಬೇಡಿಕೆ ಕಡಿಮೆಯಾಗಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ದ್ರಾಕ್ಷಿ ಬೆಲೆ ಕುಸಿತಕ್ಕೆ ಆತಂಕ ವ್ಯಕ್ತಪಡಿಸಿದ ರೈತ

ಚಿಕ್ಕಬಳ್ಳಾಪುರ ತಾಲೂಕಿನ ಗೂಣೂರು ನಿವಾಸಿ ವೆಂಕಟೇಶ ಎಂಬ ರೈತ, ತನ್ನ ಒಂದೂವರೆ ಎಕೆರೆ ಜಮೀನಿನಲ್ಲಿ ದಿಲ್ ಖುಷ್ ತಳಿಯ ದ್ರಾಕ್ಷಿ ಬೆಳೆದಿದ್ದು, ದ್ರಾಕ್ಷಿ ತೋಟ ನಿರ್ವಾಹಣೆಗೆ 5 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಕೆ.ಜಿ ದ್ರಾಕ್ಷಿಗೆ ಕನಿಷ್ಠ 50 ರೂಪಾಯಿ ಸಿಕ್ಕರೆ ಹಾಕಿದ ಬಂಡವಾಳ ವರ್ಕ್ ಔಟ್ ಆಗುತ್ತೆ, ಆದ್ರೆ, ಈಗ ಕೆ.ಜಿ ದ್ರಾಕ್ಷಿ ಕೇವಲ 20 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೊರೊನಾ ಹಾಗೂ ಮಹಾಮಳೆಯ ಹೊಡೆತದಿಂದ ಚೇತರಿಸಿಕೊಳ್ಳುತ್ತಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರ ಮೇಲೆ ಬೆಲೆ ಕುಸಿತ ಭಾರಿ ಹೊಡೆತ ನೀಡಿದ್ದು, ಈ ಹಿಂದೆ ಆಲಿಕಲ್ಲು ಮಳೆಯಿಂದಾಗಿ ನೂರಾರು ಎಕೆರೆ ದ್ರಾಕ್ಷಿ ತೋಟ ಹಾಳಾಗಿತ್ತು.

ಇದನ್ನೂ ಓದಿ: ಬಾಗೇಪಲ್ಲಿ ತಾಲೂಕಿನ ಹಲವೆಡೆ ಭೂಕಂಪನ ಅನುಭವ, ಬೆಚ್ಚಿಬಿದ್ದ ಜನ

Last Updated : May 16, 2022, 12:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.