ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಎರಡು ಗ್ರಾಮ ಪಂಚಾಯಿತಿಗಳು, 1,126 ಗ್ರಾಮಗಳು ಮತ್ತು ಎಲ್ಲಾ ತಾಲೂಕು ಕೇಂದ್ರಗಳಲ್ಲಿನ 6 ಸ್ಥಳೀಯ ಸಂಸ್ಥೆಗಳ ಪೈಕಿ 39 ವಾರ್ಡ್ಗಳು ಕೊರೊನಾ ಮುಕ್ತವಾಗಿವೆ ಎಂದು ಜಿಲ್ಲಾಧಿಕಾರಿ ಆರ್. ಲತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಚಿಂತಾಮಣಿ ತಾಲೂಕಿನ ಕಡದಲಮರಿ ಗ್ರಾಮ ಪಂಚಾಯತಿಯಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳು ಶೂನ್ಯಕ್ಕೆ ಬಂದು, ಈಗಾಗಲೇ ಕೊರೊನಾ ಮುಕ್ತ ಗ್ರಾಮ ಪಂಚಾಯಿತಿಯಾಗಿದ್ದು, ಇದೀಗ ಹೊಸದಾಗಿ ಗೌರಿಬಿದನೂರು ತಾಲೂಕಿನ ಮುದಲೋಡು ಗ್ರಾಮಪಂಚಾಯ್ತಿಯು ಈ ಪಟ್ಟಿಗೆ ಸೇರ್ಪಡೆಯಾಗಿ ಕೊರೊನಾ ಮುಕ್ತವಾಗಿದೆ.
ಚಿಕ್ಕಬಳ್ಳಾಪುರ-23, ಚಿಂತಾಮಣಿ -35, ಶಿಡ್ಲಘಟ್ಟ -28, ಬಾಗೇಪಲ್ಲಿ-25, ಗುಡಿಬಂಡೆ-8, ಗೌರಿಬಿದನೂರು-38 ಗ್ರಾಮಗಳು ಸೇರಿದಂತೆ ಒಟ್ಟಾರೆ ಈ ತಾಲೂಕುಗಳ 1,126 ಗ್ರಾಮಗಳಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳು ಶೂನ್ಯಕ್ಕೆ ಬಂದಿವೆ. ಅಲ್ಲದೆ ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು, ಶಿಡ್ಲಘಟ್ಟ ನಗರಸಭೆ, ಬಾಗೇಪಲ್ಲಿ ಪುರಸಭೆ ಹಾಗೂ ಗುಡಿಬಂಡೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಒಟ್ಟು 39 ವಾರ್ಡ್ಗಳು ಕೊರೊನಾ ಮುಕ್ತ ವಾರ್ಡ್ಗಳಾಗಿವೆ.
ಜಿಲ್ಲೆಯ ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 31 ವಾರ್ಡ್ಗಳಿದ್ದು, ಈ ಪೈಕಿ 19 ವಾರ್ಡ್ಗಳು ಕೊರೊನಾ ಮುಕ್ತವಾಗಿವೆ. ಅದೇ ರೀತಿ ಗೌರಿಬಿದನೂರು ನಗರಸಭೆ ಮತ್ತು ಬಾಗೇಪಲ್ಲಿ ಪುರಸಭೆಯಲ್ಲಿ ತಲಾ 5 ವಾರ್ಡ್ಗಳು ಕೊರೊನಾ ಮುಕ್ತವಾಗಿದ್ದು, ಚಿಕ್ಕಬಳ್ಳಾಪುರ ನಗರಸಭೆಯಲ್ಲಿ 4ವಾರ್ಡ್ಗಳಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳು ಶೂನ್ಯಕ್ಕೆ ಬಂದಿವೆ. ಉಳಿದಂತೆ ಚಿಂತಾಮಣಿ ನಗರಸಭೆ ಮತ್ತು ಗುಡಿಬಂಡೆ ಪಟ್ಟಣ ಪಂಚಾಯಿತಿಯ ತಲಾ 3 ವಾರ್ಡ್ಗಳು ಕೊರೊನಾ ಮುಕ್ತವಾಗಿವೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.