ಚಿಕ್ಕಬಳ್ಳಾಪುರ: ನಗರದ 19ನೇ ವಾರ್ಡ್ನಲ್ಲಿ ಜಿಲ್ಲಾಧಿಕಾರಿ ಆರ್.ಲತಾ ವಾರ್ಡ್ ಬೀಟ್ ಪ್ರಾರಂಭಿಸಿ ಕೋವಿಡ್-19 ಮತ್ತು ನಗರದ ಸ್ವಚ್ಛತೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ನಗರದ ಎಲ್ಲಾ ವಾರ್ಡ್ಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದು, ಅವರಿಂದ ಕೊರೊನಾ ಕುರಿತು ಜನರಲ್ಲಿ ಅರಿವು ಮೂಡಿಸುವುದು ಮತ್ತು ಯಾವುದೇ ರೋಗ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಕೋವಿಡ್ ಟೆಸ್ಟ್ ಮಾಡಿಸುವಂತೆ ಸೂಚಿಸಿದರು.
ನಗರದ ಎಲ್ಲಾ ವಾರ್ಡ್ಗಳಿಗೆ ಪ್ರತ್ಯೇಕವಾಗಿ ಸ್ವಚ್ಛತಾ ಕ್ಯಾಪ್ಟನ್ಗಳ ತಂಡವನ್ನು ರಚಿಸಿ ನಗರದಲ್ಲಿ ಹಸಿ-ಒಣ ಕಸ ಪ್ರತ್ಯೇಕವಾಗಿ ಬೇರ್ಪಡಿಸಿ ಸ್ವಚ್ಛತೆ ಕಾಪಾಡುವಂತೆ ಸೂಚಿಸಿದರು. ಅದೇ ರೀತಿ ಸ್ವಚ್ಛತಾ ಕ್ಯಾಪ್ಟನ್‌ಗಳು ಪ್ರತಿ ದಿವಸ ಒಂದು ಅಥವಾ ಎರಡು ವಾರ್ಡ್ನಂತೆ ಪರಿವೀಕ್ಷಣೆ ಮಾಡುವಂತೆ ಜಿಲ್ಲಾಧಿಕಾರಿ ಆರ್.ಲತಾ ಹೇಳಿದರು.
ಇದೇ ವೇಳೆ ಶುಚಿತ್ವ ಕಾಪಾಡದವರಿಗೆ ದಂಡ ವಿಧಿಸಲು ನಗರಸಭೆ ಆಯುಕ್ತರಿಗೆ ಸೂಚಿಸಿದ್ರು. ಯೋಜನಾ ನಿರ್ದೇಶಕರಾದ ರೇಣುಕಾ, ನಗರಸಭೆಯ ಪೌರಾಯುಕ್ತ ಲೋಹಿತ್, 19ನೇ ವಾರ್ಡ್ನ ನಗರಸಭೆ ಸದಸ್ಯೆ ರಾಜೇಶ್ವರಿ ಮತ್ತಿತರರು ವಾರ್ಡ್ ಬೀಟ್ನಲ್ಲಿ ಹಾಜರಿದ್ದರು.