ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ನಡುವೆ ಭಾರಿ ಪೈಪೋಟಿ ಎದ್ದು ಕಾಣ್ತಿದೆ. ಈ ಹಿಂದೆ ಕಾಂಗ್ರೆಸ್ನಲ್ಲಿದ್ದು, ಸ್ಪರ್ಧಿಸಿ ಗೆದ್ದ ಬಳಿಕ ಬಿಜೆಪಿ ಸೇರಿ ಅನರ್ಹಗೊಂಡ ಶಾಸಕ ಡಾ.ಕೆ.ಸುಧಾಕರ್ ರಾಜೀನಾಮೆ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಯುತ್ತಿದೆ.
ಬಿಜೆಪಿ ಪಕ್ಷದಿಂದ ಡಾ.ಕೆ. ಸುಧಾಕರ್, ಕಾಂಗ್ರೆಸ್ ಪಕ್ಷದಿಂದ ಎಂ. ಅಂಜಿನಪ್ಪ, ಜೆಡಿಎಸ್ ಪಕ್ಷದಿಂದ ರಾಧಾಕೃಷ್ಣಾ ಹಾಗೂ ಬಿಎಸ್ಪಿಯಿಂದ ಡಿ.ಆರ್. ನಾರಾಯಣಸ್ವಾಮಿ ಕಣದಲ್ಲಿದ್ದು, ಒಟ್ಟು 9 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಕ್ಷೇತ್ರದಲ್ಲಿ ಒಟ್ಟು 200,218 ಮತದಾರರಿದ್ದು, ಇದರಲ್ಲಿ 99,449 ಪುರುಷ ಮತದಾರರು, 1,00,747 ಮಹಿಳಾ ಮತದಾರರು, 46 ಸೇವಾ ಮತದಾರರು, 22 ಇತರೆ ಮತದಾರರಿದ್ದಾರೆ.
ಜಾತಿವಾರು ಲೆಕ್ಕಾಚಾರ ನೋಡುವುದಾದ್ರೆ ಪರಿಶಿಷ್ಟ ಜಾತಿಯ 51,000, ಪರಿಶಿಷ್ಟ ವರ್ಗದ 2,000, ಒಕ್ಕಲಿಗರು 48,000, ಬಲಿಜ 34,000, ಅಲ್ಪಸಂಖ್ಯಾತರು 20,000, ಹಾಗೂ ಇತರೆ ಹಿಂದಳಿದ ವರ್ಗದ 28,000 ಸಾವಿರ ಮತದಾರರಿದ್ದಾರೆ.