ಚಿಕ್ಕಬಳ್ಳಾಪುರ: ಜಿಲ್ಲೆಯ ಗುಡಿಬಂಡೆ ಬಳಿಯ ಆರ್ ಚೊಕ್ಕನಹಳ್ಳಿ ಕ್ರಾಸ್ ಬಳಿ ಕ್ರೂಸರ್ ವಾಹನ ಹಾಗೂ ಬೈಕ್ ನಡುವೆ ಬೀಕರ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತರು ಗುಡಿಬಂಡೆ ತಾಲೂಕಿನ ಮ್ಯಾಕಲಹಳ್ಳಿ ಗ್ರಾಮದ ಸಂಬಂಧಿಕರ ಮನೆಯಲ್ಲಿ ಶುಭ ಕಾರ್ಯವನ್ನು ಮುಗಿಸಿಕೊಂಡು ಹಿಂದಿರುಗುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಪೆರೇಸಂದ್ರ-ಗುಡಿಬಂಡೆಯ ರಸ್ತೆ ತಿರುವಿನಲ್ಲಿ ಕ್ರೂಸರ್ ಕಾರು ಮತ್ತು ದ್ವಿ-ಚಕ್ರವಾಹನಗಳು ಅತಿ ವೇಗವಾಗಿ ಬಂದಿದ್ದು ಮುಖಾ-ಮುಖಿ ಡಿಕ್ಕಿಯಾದ ಪರಿಣಾಮ ಬೈಕ್ನಲ್ಲಿದ್ದರು ಇಬ್ಬರು ಸಾವನ್ನಪ್ಪಿದ್ದಾರೆ.
ಯಲಹಂಕದ ಪುರುಷೋತ್ತಮ (30) ಮತ್ತು ಆತನ ಸ್ನೇಹಿತ(ಹೆಸರು ತಿಳಿದುಬಂದಿಲ್ಲ) ಎಂದು ಗುಡಿಬಂಡೆ ಪೊಲೀಸರು ತಿಳಿಸಿದ್ದಾರೆ.