ಕಳೆದ ಬಾರಿಯ ಬಿಗ್ಬಾಸ್ ವಿನ್ನರ್ ಶಶಿಕುಮಾರ್ ತಾವು ಓದಿದ ಶಾಲೆಯ 28 ವಿದ್ಯಾರ್ಥಿಗಳ ಓದಿನ ವೆಚ್ಚ ಭರಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಚಿಂತಾಮಣಿಯ ವಿ.ವಿ.ಎಸ್ ಶಾಲೆಯ 28 ವಿಧ್ಯಾರ್ಥಿಗಳನ್ನು ದತ್ತು ಪಡೆದು ಅವರ ಜವಾಬ್ದಾರಿಯ ಸಂಪೂರ್ಣ ಖರ್ಚುವೆಚ್ಚುಗಳನ್ನು ತಾವೇ ನಿಭಾಯಿಸಲಿದ್ದಾರೆ.
- View this post on Instagram
Happy to adopt these 28 kids until they complete their schooling and listen to their dreams.
">
ಶಶಿಕುಮಾರ್ ಮೂಲತಃ ಚಿಂತಾಮಣಿಯ ಹುಡುಗ. ಆಡಿ ಓದಿ ಬೆಳೆದ ಊರಿನ ವಿ.ವಿ.ಎಸ್ ಶಾಲೆಯಲ್ಲಿರುವ 28 ಮಕ್ಕಳನ್ನು ದತ್ತು ಪಡೆದು ಅವರ ವಿಧ್ಯಾಭ್ಯಾಸ, ಯೂನಿಫಾರ್ಮ್ ಹಾಗೂ ಇನ್ನಿತರ ಖರ್ಚುಗಳ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಈ ವಿಷಯವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಖುಷಿ ವ್ಯಕ್ತಪಡಿಸಿದ್ದಾರೆ ಶಶಿಕುಮಾರ್. ಭವಿಷ್ಯದಲ್ಲಿ ಇನ್ನೂ ಹೆಚ್ಚು ಮಕ್ಕಳನ್ನು ದತ್ತು ಪಡೆದು ಶಾಲೆಯ ಋಣ ತೀರಿಸಬೇಕು ಎಂಬುದು ಶಶಿ ಅವರ ಆಸೆಯಂತೆ.
ಮಾರ್ಡನ್ ರೈತ, ಬಿಗ್ಬಾಸ್ ಸೀಸನ್ 6 ವಿನ್ನರ್ ಶಶಿ ಕುಮಾರ್, ತನ್ನ ಬಹುವರ್ಷಗಳ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಕಿರುತೆರೆಯಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡು ಆ ನಂತರ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ವಿನ್ನರ್ ಆದ ಶಶಿ ಈಗ ಸಿನಿಮಾ ಕ್ಷೇತ್ರದಲ್ಲೂ ಬ್ಯುಸಿ ಆಗಿದ್ದಾರೆ. ಕೆಲವೇ ದಿನಗಳಲ್ಲಿ ಅವರ ನಟನೆಯ ಚಿತ್ರವೊಂದು ಬಿಡುಗಡೆಯಾಗಲಿದೆ.