ETV Bharat / state

ಬಾರ್ ನಲ್ಲಿ ಕಳ್ಳತನದ ಕಥೆ ಕಟ್ಟಿ ಪೊಲೀಸರ ಅತಿಥಿಯಾದ ಕ್ಯಾಷಿಯರ್

author img

By

Published : May 29, 2020, 4:31 PM IST

ಲಾಕ್​ಡೌನ್​ ವೇಳೆಯಲ್ಲಿ ಅಕ್ರಮವಾಗಿ ಮದ್ಯ ಕದ್ದು ಮಾರಾಟ ಮಾಡಿದ ಬಾರ್​ ಕ್ಯಾಷಿಯರ್​​, ಬಾರ್​ನಲ್ಲಿ ಕಳ್ಳತನವಾಗಿದೆ ಎಂದು ಕಥೆ ಕಟ್ಟಿದ್ದ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ನಿಜವಾದ ಕಳ್ಳ ಕ್ಯಾಷಿಯರ್​ ಎಂದು ಪತ್ತೆ ಹಚ್ಚಿ ಆತನನ್ನು ಬಂಧಿಸಿದ್ದಾರೆ.

Bar cashier has been arrested
ಬಾರ್​ ಕ್ಯಾಶಿಯರ್​ನನ್ನು ಬಂಧಿಸಿದ ಪೊಲೀಸರು

ಶಿಡ್ಲಘಟ್ಟ(ಚಿಕ್ಕಬಳ್ಳಾಪುರ): ಲಾಕ್​ಡೌನ್ ಹಿನ್ನೆಲೆ ಬಾರ್ ಅಂಡ್ ರೆಸ್ಟೊರೆಂಟ್ ನಲ್ಲಿ ಕಳ್ಳತನದ ಕಥೆ ಕಟ್ಟಿ ಎಸ್ಕೆಪ್ ಆಗಿದ್ದ ಬಾರ್ ಕ್ಯಾಷಿಯರ್‌ನನ್ನು ಬಂಧಿಸಿದ ಘಟನೆ ನಗರದಲ್ಲಿ ನಡೆದಿದೆ.

ಶಿಡ್ಲಘಟ್ಟದ ಸ್ವಸ್ತಿಕ್ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ನಾಗಭೂಷಣ್ ಎಂಬ ವ್ಯಕ್ತಿ ಲಾಕ್​​ಡೌನ್ ವೇಳೆ ಬಾರ್ ನಲ್ಲಿದ್ದ 30 ರೂಪಾಯಿ ಬೆಲೆ ಬಾಳುವ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಿ ಕಳ್ಳತನ ನಡೆದಿದೆ ಎಂದು ಕಥೆ ಕಟ್ಟಿ ಸುಮಾರು 1,50,000 ಸಾವಿರ ಹಣವನ್ನು ಕದ್ದು ಎಸ್ಕೆಪ್ ಆಗಲು ಯತ್ನಿಸಿದ್ಧ.

ಬಾರ್​ ಕ್ಯಾಷಿಯರ್​ನನ್ನು ಬಂಧಿಸಿದ ಪೊಲೀಸರು

ಈ ಬಗ್ಗೆ ಸ್ವಸ್ತಿಕ್ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕ ನಾಗರಾಜ್, ಪೊಲೀಸರಿಗೆ ದೂರು ನೀಡಿದ್ದು, ದೂರಿನನ್ವಯ ಕಾರ್ಯೋ ನ್ಮುಖರಾದ ಗ್ರಾಮಾಂತರ ಪೊಲೀಸರು ಖತರ್ನಾಕ್​​​​​ ಕಳ್ಳನನ್ನು ಬಂಧಿಸಿ ಹಣ ಮತ್ತು ಕಳ್ಳತನ ಮಾಡಲು ಬಳಸಿದ್ದ ಸಾಮಾನುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಯಾಚರಣೆ ಹೇಗೆ?

ದೂರಿನ ಅನ್ವಯ ತನಿಖೆಯನ್ನು‌ ಮುಂದುವರೆಸಿದ ಪೊಲೀಸರು ಸಿಸಿ ಟಿವಿ ಫೂಟೇಜ್​ ಪರಿಶೀಲನೆ ನಡೆಸಿದ ವೇಳೆ ಕಳ್ಳತನದ ಕೃತ್ಯ ಬಯಲಿಗೆ ಬಂದಿದೆ. ಸಾಕಷ್ಟು ಮದ್ಯ ಹಾಗೂ ಹಣವನ್ನು‌ ಕದ್ದಿದ್ದ ಕ್ಯಾಷಿಯರ್, ಸಿನಿಮಾ ಶೈಲಿಯಲ್ಲಿ ಬಾಗಿಲುಗಳನ್ನು ಹೊಡೆದು ಕಳ್ಳತನದ ಕೃತ್ಯವನ್ನು ಎಸೆಗಿ ಸಿಕ್ಕಿಬಿದ್ದಿದ್ದಾನೆ. ಈಗಾಗಲೇ 1,50,000 ಸಾವಿರ ಹಣ ಸೇರಿದಂತೆ ಮದ್ಯವನ್ನು ವಶಪಡಿಸಿಕೊಂಡ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.