ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಛಲವಾದಿ ಮಹಾಸಭಾ ಬಾಗೇಪಲ್ಲಿ ತಾಲೂಕು ಘಟಕಕ್ಕೆ ಹೊಸ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮ ನಡೆಯಿತು.
ಛಲವಾದಿ ಮಹಾಸಭಾ ಬಾಗೇಪಲ್ಲಿ ತಾಲೂಕು ನೂತನ ಪಧಾದಿಕಾರಿಗಳ ಆಯ್ಕೆ ಪ್ರಕ್ರಿಯೆ ಚಿಕ್ಕಬಳ್ಳಾಪುರ ಜಿಲ್ಲೆ ಛಲವಾದಿ ಅಧ್ಯಕರಾದ ಕೃಷ್ಣಪ್ಪ ಸಮ್ಮುಖದಲ್ಲಿ ನಡೆಯಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೃಷ್ಣಪ್ಪ, ತಾಲೂಕಿನಲ್ಲಿ ಹಿಂದುಳಿದಿರುವ ಛಲವಾದಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಪದಾಧಿಕಾರಿಗಳು ದುಡಿಯಬೇಕು ಎಂದು ಕರೆ ನೀಡಿದರು.
ಬಾಗೇಪಲ್ಲಿ ಛಲವಾದಿ ಸಮಿತಿ ತಾಲೂಕು ಘಟಕಕ್ಕೆ ಅಧ್ಯಕ್ಷರಾಗಿ ಟಿ. ರಾಮಪ್ಪ. ಉಪಾಧ್ಯಕ್ಷರಾಗಿ ಓಬಳೇಶ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ವಿ. ರಮೇಶ ಕಾನಗಮಾಕಲಪಲ್ಲಿ, ಸಹಕಾರ್ಯದರ್ಶಿಗಳಾಗಿ ಈಶ್ವರಪ್ಪ, ಗೌರವಾಧ್ಯಕ್ಷರಾಗಿ ಕದಿರಪ್ಪ ಹಾಗೂ ಖಜಾಂಚಿಯಾಗಿ ವೈ. ಶಂಕರ ಅವರನ್ನು ಆಯ್ಕೆ ಮಾಡಲಾಯಿತು.