ಬಾಗೇಪಲ್ಲಿ(ಚಿಕ್ಕಬಳ್ಳಾಪುರ): ಲಾಕ್ಡೌನ್ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು ದಿನಬಳಕೆ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ದಿನಸಿ ಅಂಗಡಿ ಮಾಲಿಕರಿಗೆ ಆರಕ್ಷಕ ವೃತ ನಿರೀಕ್ಷಕರಾದ ನಯಾಜ್ ಬೇಗ್ ಬಿಸಿ ಮುಟ್ಟಿಸಿದ್ಧಾರೆ.
ಅಗತ್ಯ ವಸ್ತುಗಳಿಗೆ ಬೇಡಿಕೆ ಹೆಚ್ಚಿದಂತೆ ವರ್ತಕರು ಅವುಗಳ ಬೆಲೆ ಹೆಚ್ಚಿಸುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ದೂರು ಬಂದಿವೆ. ವಸ್ತುಗಳ ನಿಗದಿತ ಬೆಲೆಗಿಂತ ಹೆಚ್ಚಿನ ಹಣ ಪಡೆದರೆ ಅಪರಾಧವೆಂದು ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಅಂತಹ ವರ್ತಕರ ವಾಣಿಜ್ಯ ಪರವಾನಗಿ ರದ್ದುಪಡಿಸುತ್ತೇವೆ.
ಜನ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ಜನರನ್ನು ಶೋಷಿಸಬಾರದು ಎಂದು ಸೂಚಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಿನ ಬಳಕೆ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ ಸೂಚನೆ ಕೊಟ್ಟರೂ ಕೆಲವರು ದುಪ್ಪಟ್ಟು ಬೆಲೆಗೆ ಮಾರುತ್ತಿರುವ ಆರೋಪ ಕೇಳಿಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ ನಿಗದಿತ ಬೆಲೆಗಿಂತ (ಎಂಆರ್ಪಿ) ಅಧಿಕ ಮೊತ್ತಕ್ಕೆ ದಿನಸಿ ಪದಾರ್ಥಗಳನ್ನು ಮಾರುತ್ತಿರುವುದಾಗಿ ಕೆಲವರು ದೂರು ನೀಡಿದ್ದರು. ಅಂಥ ದೂರುಗಳ ಆಧಾರದ ಮೇಲೆ ದಾಳಿ ನಡೆಸಲಾಗುತ್ತದೆ ಎಂದು ಬಾಗೇಪಲ್ಲಿ ತಾಲ್ಲೂಕು ತಹಶಿಲ್ದಾರರ್ ಎಂ ನಾಗರಾಜ್ ಹೇಳಿದರು.
ತಾಲ್ಲೂಕು ಆಡಳಿತದ ನಿಯಮಗಳು:-
* ವರ್ತಕರು ದಿನಸಿ ವಸ್ತುಗಳ ಧರದಪಟ್ಟಿ ಬೋರ್ಡ್ ಅಂಗಡಿ ಮುಂದೆ ನೇತುಹಾಕಬೇಕು.
* ಅಂಗಡಿಗೆ ಬರುವ ಗ್ರಾಹಕರ ಸಾಮಾಜಿಕ ಅಂತರ ಕಾಪಾಡುವ ಜವಾಬ್ದಾರಿ ಅಂಗಡಿ ಮಾಲೀಕರದ್ದು.
* ತಾಲ್ಲೂಕು ಆಡಳಿತ ನಿಗದಿ ಪಡಿಸಿದ ಸಮಯದಲ್ಲಿ (6 ಗಂಟೆಯಿಂದ 11 ಗಂಟೆ ವರಿಗೆ) ವಸ್ತುಗಳನ್ನು ಮಾರಾಟ ಮಾಡಬೇಕು.
* ತಾಲ್ಲೂಕು ಆಡಳಿತ ನಿಗದಿಪಡಿಸಿದ ದರದಲ್ಲಿ ದಿನನಿತ್ಯದ ವಸ್ತುಗಳನ್ನು ಮಾರಾಟ ಮಾಡಬೇಕು.