ಬಾಗೇಪಲ್ಲಿ: ಗಡಿಯಲ್ಲಿ ಶತ್ರುಗಳನ್ನು ಹಿಮ್ಮೆಟ್ಟಿ ಕೈ ಕಾಲುಗಳನ್ನು ಕಳೆದುಕೊಂಡರೂ ಆತ್ಮವಿಶ್ವಾಸ ಕಳೆದುಕೊಳ್ಳದೆ ಸೇನೆ ಬಗ್ಗೆ ಜಾಗೃತಿ ಮೂಡಿಸಲು ಹೈದರಾಬಾದ್‌ನಿಂದ ಬಂದ ವಿಶೇಷಚೇತನ ಯೋಧರಿಗೆ ಪಟ್ಟಣದ ಜನತೆ ಸೇರಿದಂತೆ ಜಿಲ್ಲಾ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಸ್ವಾಗತ ನೀಡಿದರು.
ಈ ವೇಳೆ ಹೈದರಾಬಾದ್ ಆದಿತ್ಯ ಮೆಹ್ತಾ ಫೌಂಡೇಷನ್ ಮುಖ್ಯಸ್ಥ ಅದಿತ್ಯ ಮೆಹ್ತಾ ಮಾತನಾಡಿ, ದೇಶದ ಗಡಿಯಲ್ಲಿ ಯುದ್ಧ ಮಾಡುವಾಗ ತಮ್ಮ ಕೈ, ಕಾಲುಗಳನ್ನು ಕಳೆದುಕೊಂಡರೂ ದೇಶಕ್ಕಾಗಿ ಪ್ರಾಣ ಕೊಡಲು ಸೈನಿಕರು ಸಿದ್ಧರಿರಬೇಕು. ಸೇನೆಯಲ್ಲಿ ಸೇವೆ ಮಾಡಬೇಕೆಂಬ ಆಸೆಯನ್ನು ಯುವಕರಲ್ಲಿ ಮೂಡಿಸುವ ಸಲುವಾಗಿ ಹಾಗೂ ಆತ್ಮವಿಶ್ವಾಸ ತುಂಬುವ ಸಲುವಾಗಿ ಈ ಸೈಕಲ್ ರ್ಯಾಲಿ ಹಮ್ಮಿಕೊಂಡಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ನಯಾಜ್ ಬೇಗ್, ಸುನಿಲ್ ಕುಮಾರ್, ಗಡಿ ಭದ್ರತಾ ಪಡೆಯ ಸಹಾಯಕ ಕಮಾಂಡರ್ ಅರವಿಂದ ಪಾಲ್ ,ಮೂರ್ತಿ ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.