ಚಿಂತಾಮಣಿ: ನಗರದಲ್ಲಿ ಅನಿಲ (ಗ್ಯಾಸ್) ಬಂಕ್ ತೆರೆಯಬೇಕು ಎಂದು ಒತ್ತಾಯಿಸಿ ಆಟೋ ಚಾಲಕರ ಸಂಘದ ಕಾರ್ಯಕರ್ತರು ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ತಾಲೂಕಿನಲ್ಲಿ ಸುಮಾರು 2000 ಹೆಚ್ಚು ಆಟೋಗಳು ಪ್ರತಿನಿತ್ಯ ಕಾರ್ಯ ನಿರ್ವಹಿಸುತ್ತಿವೆ. ಅಷ್ಟೇ ಅಲ್ಲದೆ ಜಿಲ್ಲೆಗೆ ಪ್ರತಿನಿತ್ಯ ಕೋಟ್ಯಾಂತರ ವಹಿವಾಟು ನಡೆಸುತ್ತಿರುವ ಚಿಂತಾಮಣಿ ನಗರದಲ್ಲಿ ಗ್ಯಾಸ್ ಬಂಕ್ ಇಲ್ಲದೆ ಆಟೋ ಚಾಲಕರು ಪರಾದಾಡುವಂತಾಗಿದೆ.ಸದ್ಯ ಇದರ ಸಲುವಾಗಿಯೇ ಆಟೋ ಚಾಲಕರು ಪ್ರವಾಸಿ ಮಂದಿರದಲ್ಲಿ ಜಮಾವಣೆಯಾಗಿ ಅಲ್ಲಿಂದ ಮೆರವಣಿಗೆಯಲ್ಲಿ ತಹಶೀಲ್ದಾರ್ ಕಚೇರಿಗೆ ತೆರಳಿ ಗ್ಯಾಸ್ ಬಂಕ್ ತೆರೆಯಲು ಮನವಿ ಸಲ್ಲಿಸಿದರು.
ಚಿಂತಾಮಣಿ ತಾಲೂಕಿನಾದ್ಯಂತ ಸುಮಾರು 2 ಸಾವಿರ ಆಟೊ ರಿಕ್ಷಾಗಳಿವೆ. ಬಹುತೇಕ ಅನಿಲ ಬಳಸುವ ವಾಹನಗಳಾಗಿವೆ. ಆದರೆ ಅನಿಲ ತುಂಬಿಸುವ ಗ್ಯಾಸ್ ಬಂಕ್ ಇಲ್ಲದೆ ಪರದಾಡುವಂತಾಗಿದೆ. ಪೆಟ್ರೋಲ್ ಬಳಸುವುದರಿಂದ ಹೆಚ್ಚಿನ ಖರ್ಚು ಬರುವುದರಿಂದ ಪರಿಸರ ಮಾಲಿನ್ಯವು ಉಂಟಾಗುತ್ತದೆ ಎಂದು ಚಾಲಕರ ಸಂಘದ ಮುಖಂಡರು ಮನವಿಯಲ್ಲಿ ತಿಳಿಸಿದ್ದಾರೆ.