ಚಿಕ್ಕಬಳ್ಳಾಪುರ: ಆಟೋ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿಯ ಗೌಡಗೆರೆ ಗ್ರಾಮದ ತಿರುವಿನಲ್ಲಿ ನಡೆದಿದೆ.
ಗಂಗಣ್ಣ (32) ಮೃತ ದುರ್ದೈವಿ. ಆಟೋ ಮತ್ತು ಬೈಕ್ ಡಿಕ್ಕಿಯಿಂದಾಗಿ ದ್ವಿಚಕ್ರ ವಾಹನ ಗಂಗಣ್ಣ ತಲೆ ಛಿದ್ರಗೊಂಡಿದೆ. ಆಟೋ ಚಾಲಕನ ಅಜಾಗರುಕತೆಯಿಂದ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಇನ್ನೂ ದ್ವಿಚಕ್ರ ವಾಹನದ ಹಿಂಬದಿ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.