ETV Bharat / state

ದುಷ್ಕರ್ಮಿಗಳಿಂದ ಯುವಕನ ಮೇಲೆ ಹಲ್ಲೆ : ಗಂಟೆಗಟ್ಟಲೆ ಒದ್ದಾಡಿದರೂ ಬಾರದ ಆ್ಯಂಬುಲೆನ್ಸ್ - ರಸ್ತೆಯಲ್ಲೇ ಒದ್ದಾಡಿದರೂ ಸ್ಥಳಕ್ಕೆ ಬಾರದ ಆ್ಯಂಬುಲೆನ್ಸ್

ತಲೆ, ಕೈಕಾಲುಗಳಿಗೆ ತೀವ್ರವಾದ ಗಾಯಗಳಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನನ್ನು ಆಸ್ಪತ್ರೆಗೆ ಸೇರಿಸಲು ಸ್ಥಳೀಯರು ಆ್ಯಂಬುಲೆನ್ಸ್​ಗೆ ಕರೆ ಮಾಡಿದ್ದರು. ಆದರೆ ಗಂಟೆಗಟ್ಟಲೆ ಕಾದರೂ ಆ್ಯಂಬುಲೆನ್ಸ್ ಮಾತ್ರ ಬರಲೇ ಇಲ್ಲ.

Assault on a young man in CKB
ರಕ್ತದ ಮಡುವಿನಲ್ಲಿ ಒದ್ದಾಡಿದ ಯುವಕ
author img

By

Published : Sep 4, 2020, 6:17 PM IST

ಚಿಕ್ಕಬಳ್ಳಾಪುರ : ಹಲ್ಲೆಗೊಳಗಾಗಿ ತೀವ್ರ ಗಾಯಗೊಂಡಿದ್ದ ಯುವಕನೋರ್ವ ಆ್ಯಂಬುಲೆನ್ಸ್ ಸಿಗದೆ ಗಂಟೆಗಟ್ಟಲೆ ಪರದಾಟ ನಡೆಸಿ ಆಸ್ಪತ್ರೆ ಸೇರಿಕೊಂಡ ಘಟನೆ ನಗರದಲ್ಲಿ ನಡೆದಿದೆ.

ನಗರದ ಪ್ರಶಾಂತ ನಗರದಲ್ಲಿ ದುಷ್ಕರ್ಮಿಗಳು 24 ವರ್ಷದ ಅಹಮದ್ ಎಂಬ ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು. ತಲೆ, ಕೈಕಾಲುಗಳಿಗೆ ತೀವ್ರ ಗಾಯಗಳಾಗಿ ರಕ್ತ ಮಡುವಿನಲ್ಲಿ ಬಿದ್ದಿದ್ದ ಯುವಕನನ್ನು ಆಸ್ಪತ್ರೆಗೆ ಸೇರಿಸಲು ಸ್ಥಳೀಯರು ಆ್ಯಂಬುಲೆನ್ಸ್​ಗೆ ಕರೆ ಮಾಡಿದ್ದರು. ಆದರೆ, ಗಂಟೆಗಟ್ಟಲೆ ಕಾದರೂ ಆ್ಯಂಬುಲೆನ್ಸ್ ಮಾತ್ರ ಬರಲೇ ಇಲ್ಲ. ಕೊನೆಗೆ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಸರ್ ಎಂವಿ ಸೇವಾ ಸಂಘದ ಅಧ್ಯಕ್ಷ ಪ್ರಕಾಶ್, ಆಟೋದಲ್ಲಿ ಯುವಕನನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣಾಪಾಯದಿಂದ ಕಾಪಾಡಿದ್ದಾರೆ.

ರಕ್ತದ ಮಡುವಿನಲ್ಲಿ ಒದ್ದಾಡಿದ ಯುವಕ

ರಸ್ತೆಯಲ್ಲಿ ಯುವಕನೊಬ್ಬ ಗಂಟೆಗಟ್ಟಲೆ ನರಳಾಡಿದರೂ ಸ್ಥಳಕ್ಕೆ ಬಾರದ ಆ್ಯಂಬುಲೆನ್ಸ್ ಸಿಬ್ಬಂದಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.