ಚಿಕ್ಕಬಳ್ಳಾಪುರ: ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲೆಯ 6 ತಾಲೂಕುಗಳಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ 6 ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ಹುದ್ದೆಗಳು ಖಾಲಿ ಇದ್ದು. ಗೌರವಧನ ಆಧಾರದ ಮೇಲೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ನೇಮಕ ಮಾಡಿಕೊಳ್ಳಲಾಗುವುದು. ಸಹಾಯಕಿಯರ ಹುದ್ದೆಗೆ ಅಂಗವಿಕಲರ ಅರ್ಹರಾಗುವುದಿಲ್ಲ.
ಹುದ್ದೆಗಳು..
- ಕಾರ್ಯಕರ್ತೆಯರ ಹುದ್ದೆಗಳು:- 17 (8 ಮಿನಿ ಅಂಗನವಾಡಿ )
- ಸಹಾಯಕಿಯರ ಹುದ್ದೆಗಳು :- 73
ಒಟ್ಟು : 90
ವಯೋಮಿತಿ...
- ಕನಿಷ್ಠ 18 ವರ್ಷದಿಂದ ಗರಿಷ್ಟ 35 ವರ್ಷ
ಆದ್ಯತೆ :
- ವಿದ್ಯಾರ್ಹತೆ, ವಯೋಮಿತಿ, ಆ್ಯಸಿಡ್ ದಾಳಿಗೆ ತುತ್ತದವರು. ಇಲಾಖೆಯ ಸಂಸ್ಥೆಗಳಲ್ಲಿ ಹಾಗೂ ರಾಜ್ಯ ಮಹಿಳಾ ನಿಲಯಗಳಲ್ಲಿ ಆಶ್ರಯ ಪಡೆದವರು, ವಿಧವೆಯರು ಮತ್ತು ಸ್ಥಳೀಯರಿಗೆ ಆದ್ಯತೆ ನೀಡಿ ಆಯ್ಕೆ ಮಾಡಲಾಗುವುದು.
ಗೌರವಧನ :
- ಕಾರ್ಯಕರ್ತೆಗೆ ಮಾಸಿಕ 10,000 ರೂ. ವೇತನ
- ಮಿನಿ ಅಂಗನವಾಡಿ ಕಾರ್ಯಕರ್ತೆಗೆ 5,750 ರೂ. ವೇತನ
- ಸಹಾಯಕರಿಗೆ 5,000 ರೂ ವೇತನ
ಬೇಕಾದ ದಾಖಲೆಗಳು
- ಅಭ್ಯರ್ಥಿಯ ಜನನ ಪ್ರಮಾಣ ಪತ್ರ
- ವಿದ್ಯಾರ್ಹತೆ ಪ್ರಮಾಣ ಪತ್ರ
- ವಾಸಸ್ಥಳ ದೃಡೀಕರಣ ಪತ್ರ
- ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕು
- ಆನ್ಲೈನ್ ಅರ್ಜಿಗಳಿಗೆ ಮಾತ್ರ ಮಾನ್ಯತೆ ಇದ್ದು. ದಾಖಲೆಗಳು ಆಸ್ಪಷ್ಟವಾಗಿದ್ದಲ್ಲಿ ಅರ್ಜಿ ತಿರಸ್ಕರಿಸಲಾಗುವುದು.
ಎಲ್ಲಿವೆ ಹುದ್ದೆಗಳು
- ಬಾಗೇಪಲ್ಲಿ, ಗುಡಿಬಂಡೆ, ಶಿಡ್ಲಘಟ್ಟ, ಗೌರಿಬಿದನೂರು, ಚಿಂತಾಮಣಿ, ಚಿಕ್ಕಬಳ್ಳಾಪುರ, ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಬರುವ ಗ್ರಾಮಗಳ ಅಂಗನವಾಡಿಗಳಲ್ಲಿ ಹುದ್ದೆಗಳು ಖಾಲಿ ಇವೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 21/04/20121
ಅಧಿಸೂಚನೆಗೆ : https://bit.ly/3wG2qsm