ETV Bharat / state

ಆಂಧ್ರದ ಕಳ್ಳತನ ಆರೋಪಿ ಕರ್ನಾಟಕದಲ್ಲಿ ಅರೆಸ್ಟ್: 14 ಬೈಕ್​ ವಾಹನ ವಶಕ್ಕೆ - ಬಾಗೇಪಲ್ಲಿ ಪೊಲೀಸ್​ ಠಾಣೆ

ಲೇಪಾಕ್ಷಿ, ಕೊಡಿಕೊಂಡ ಚೆಕ್ ಪೋಸ್ಟ್, ಗೋರಂಟ್ಲ ಸೇರಿದಂತೆ ವಿವಿಧ ಸ್ಥಳಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಗೋರಂಟ್ಲ, ಬಾಗೇಪಲ್ಲಿ, ಪುಟ್ಟಪರ್ತಿ ಹಾಗೂ ವಿವಿಧ ಸ್ಥಳಗಳಲ್ಲಿ ಮಾರಾಟ ಮಾಡುತ್ತಿದ್ದ ಆಂಧ್ರಪ್ರದೇಶದ ಆರೋಪಿ ಮಂದಲ ಲಕ್ಷ್ಮೀಪತಿ ಎಂಬಾತನನ್ನು ಬಾಗೇಪಲ್ಲಿ ಪೊಲೀಸ್​ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆತನಿಂದ ಸುಮಾರು 6 ಲಕ್ಷ ಮೌಲ್ಯದ 14 ದ್ವಿಚಕ್ರ ವಾಹನಗಳನ್ನು ಪಡಿಸಿಕೊಂಡಿದ್ದಾರೆ.

andrapradesh-theif-arrested-in-karnataka
ಆಂಧ್ರಪ್ರದೇಶದ ಕಳ್ಳನನ್ನು ಕರ್ನಾಟಕದಲ್ಲಿ ಪೊಲೀಸರು ಬಂಧಿಸಿದ್ದಾರೆ.
author img

By

Published : Mar 13, 2022, 4:36 PM IST

ಬಾಗೇಪಲ್ಲಿ: ಬಾಗೇಪಲ್ಲಿ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳ್ಳತನದ ಆರೋಪಿಯನ್ನು ಬಂಧಿಸಿರುವ ಬಾಗೇಪಲ್ಲಿ ಠಾಣೆಯ ಪೊಲೀಸರು ಆತನಿಂದ ಸುಮಾರು 6 ಲಕ್ಷ ಮೌಲ್ಯದ 14 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಆಂಧ್ರಪ್ರದೇಶದ ಗೋರಂಟ್ಲ ಟೌನ್​ನ ಎನ್.ಆರ್.ಕಾಲೊನಿ ನಿವಾಸಿ ಮಂದಲ ಲಕ್ಷ್ಮೀಪತಿ (31) ಬಂಧಿತ ಆರೋಪಿ.

ಘಟನೆಯ ವಿವರ: ಬಾಗೇಪಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿ ಮೋಹನ್ ಹಾಗೂ ಅರುಣ್ ಅವರು ಗಸ್ತು ಕರ್ತವ್ಯ ನಿರ್ವಹಿಸಿಕೊಂಡು ಬಾಗೇಪಲ್ಲಿ ಪಟ್ಟಣದ ಟಿ.ಬಿ.ಕ್ರಾಸ್ ಬಳಿ ಬಂದಾಗ, ಟಿ.ಬಿ. ಕ್ರಾಸ್ ಕಡೆಯಿಂದ ಬಾಗೇಪಲ್ಲಿ ಪಟ್ಟಣದ ಕಡೆಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬ ಪೊಲೀಸರನ್ನು ಕಂಡೊಡನೆ ಗಾಬರಿಯಿಂದ ವಾಹನವನ್ನು ಹಿಂದಕ್ಕೆ ತಿರುಗಿಸಲು ಪ್ರಯತ್ನಿಸಿದ್ದನು. ಆತನನ್ನು ಪೊಲೀಸರು ಹಿಂಬಾಲಿಸಿದಾಗ ದ್ವಿಚಕ್ರ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಲು ಯತ್ನಿಸಿದ್ದ.

ಪೊಲೀಸರು ಆತನನ್ನು ಹಿಡಿದು ವಿಚಾರಿಸಿದಾಗ ತನ್ನ ಹೆಸರು ಮಂದಲ ಲಕ್ಷ್ಮೀಪತಿ ಲೇಟ್ ಮಂದಲ ಲಕ್ಷ್ಮೀನಾರಾಯಣ, 31 ವರ್ಷ, ಚಾಲಕ ವೃತ್ತಿ ನಿರ್ವಹಿಸುತ್ತಿರುವುದಾಗಿ ಹೇಳಿದ್ದಾನೆ. ಅಲ್ಲದೆ, ತಾನು ಆಂಧ್ರಪ್ರದೇಶದ ಹಿಂದೂಪುರ ತಾಲೂಕಿನ ಗೋರಂಟ್ಲ ಟೌನ್​ನ ಎನ್.ಆರ್.ಕಾಲೊನಿಯವನು ಎಂದು ತಿಳಿಸಿದ್ದಾನೆ. ಆತನ ಬಳಿ ಇದ್ದ ದ್ವಿಚಕ್ರ ವಾಹನದ ಬಗ್ಗೆ ಮಾಹಿತಿ ಕೇಳಿದಾಗ ಯಾವುದೇ ಸಮಂಜಸವಾದ ಉತ್ತರವನ್ನು ನೀಡದೇ ಇದ್ದು, ದ್ವಿಚಕ್ರ ವಾಹನವನ್ನು ಪರಿಶೀಲಿಸಿದಾಗ ಎ.ಪಿ-2l, ಬಿ.ಡಬ್ಲ್ಯೂ-5025 ನೋಂದಣಿ ಸಂಖ್ಯೆಯ ಹೀರೋ ಸ್ಪ್ಲೆಂಡರ್ ಪ್ಲಸ್ ಎಂದು ತಿಳಿದುಬಂದಿದೆ. ಆದರೆ ಆತನ ಬಳಿ ವಾಹನಕ್ಕೆ ಸಂಬಂಧಿಸಿದ ದಾಖಲಾತಿಗಳು ಇಲ್ಲದೇ ಇದ್ದ ಕಾರಣ ಪೊಲೀಸರಿಗೆ ಕಳ್ಳತನ ಮಾಡಿರುವ ಬಗ್ಗೆ ಅನುಮಾನ ಬಂದಿದೆ.

ಆ ವ್ಯಕ್ತಿಯನ್ನು ವಾಹನ ಸಮೇತ ಮುಂದಿನ ಕ್ರಮಕ್ಕಾಗಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಲೇಪಾಕ್ಷಿ, ಕೊಡಿಕೊಂಡ ಚೆಕ್ ಪೋಸ್ಟ್, ಗೋರಂಟ್ಲ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕಳ್ಳತನ ಮಾಡಿ ಗೋರಂಟ್ಲ, ಬಾಗೇಪಲ್ಲಿ, ಪುಟ್ಟಪರ್ತಿ ಹಾಗೂ ವಿವಿಧ ಸ್ಥಳಗಳಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾನೆ. ಮಾಹಿತಿ ಆಧಾರದಲ್ಲಿ ಪೊಲೀಸರು ಸುಮಾರು 6,00,000 ರೂ. ಬೆಲೆ ಬಾಳುವ ಹೀರೋ ಹೊಂಡಾ ಕಂಪನಿಯ ವಿವಿಧ ಮಾದರಿಯ 14 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.