ಚಿಕ್ಕಬಳ್ಳಾಪುರ: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಂತಾಮಣಿ ತಾಲೂಕಿನ ಕೈವಾರ ಕ್ರಾಸ್ ಬಳಿ ನಡೆದಿದೆ.
ಮೃತರನ್ನು ಬೆಟ್ಟಪ್ಪ (45) ಮತ್ತು ಕಲ್ಯಾಣ್ (25) ಎಂದು ಗುರುತಿಸಲಾಗಿದ್ದು, ಇವರಿಬ್ಬರು ಮೂಲತಃ ಕೋಲಾರ ತಾಲೂಕಿನ ಕ್ಯಾಲನೂರು ನಿವಾಸಿಗಳೆಂದು ತಿಳಿದುಬಂದಿದೆ.
ಇನ್ನು ಮೃತರು ಚಿಂತಾಮಣಿಯಿಂದ ಕ್ಯಾಲನೂರು ಕಡೆ ತೆರಳುವ ವೇಳೆ ಈ ಘಟನೆ ನಡೆದಿದೆ. ಅಪರಿಚಿತ ವಾಹನ ಅಪಘಾತ ನಡೆಸಿ ಪರಾರಿಯಾಗಿದೆ. ಜನರು ಸ್ಥಳಕ್ಕೆ ಧಾವಿಸಿ ಆಂಬ್ಯುಲೆನ್ಸ್ಗೆ ಕರೆ ಮಾಡಿದರೂ ಸೂಕ್ತ ಸಮಯಕ್ಕೆ ಬಂದಿಲ್ಲವೆಂದು ಆಂಬ್ಯುಲನ್ಸ್ ಸಿಬ್ಬಂದಿಗೆ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದರು.
ಮೃತದೇಹಗಳನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ರವಾನಿಸಲಾಗಿದೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.