ETV Bharat / state

ಪ್ರಚಾರ ಭರಾಟೆಯಲ್ಲಿ ಸಮಯ ಮರೆತ ಮುನಿಯಪ್ಪ, ನೀತಿ ಸಂಹಿತೆ ಉಲ್ಲಂಘನೆ

author img

By

Published : Apr 7, 2019, 5:09 PM IST

ಮೈತ್ರಿ ಅಭ್ಯರ್ಥಿ ಕೆ.ಎಚ್ .ಮುನಿಯಪ್ಪ ಚಿಂತಾಮಣಿ ತಾಲೂಕಿನ ಹಲವೆಡೆ ಬಿರುಸಿನ ಮತ ಪ್ರಚಾರ ನಡೆಸುತ್ತಿದ್ದು, ಕೊಟ್ಟ ಸಮಯಕ್ಕಿಂತ ಹೆಚ್ಚಿನ ಕಾಲ ಸಭೆ ನಡೆಸಿ ನೀತಿಸಂಹಿತೆ ಉಲ್ಲಂಘನೆ ಮಾಡಿರುವ ಘಟನೆ ನಡೆದಿದೆ.

ಮೈತ್ರಿ ಅಭ್ಯರ್ಥಿ ಮುನಿಯಪ್ಪ ಸಭೆ

ಚಿಕ್ಕಬಳ್ಳಾಪುರ: ಕೋಲಾರ ಲೋಕಸಭಾ ಕ್ಷೇತ್ರವ್ಯಾಪ್ತಿಯಲ್ಲಿರುವ ಚಿಂತಾಮಣಿ ಹಾಗೂ ಶಿಡ್ಲಘಟ್ಟ ಅಭ್ಯರ್ಥಿಗಳ ಪಾಲಿಗೆ ಬಹಳ ಮುಖ್ಯವಾದ ಕ್ಷೇತ್ರಗಳಾಗಿವೆ. ವಿಧಾನಸಭಾ ಕ್ಷೇತ್ರಗಳಾಗಿರುವ ಈ ಎರಡೂ ಕಡೆ ಮತಭೇಟೆ ನಡೆಸುವಾಗ ಕೊಟ್ಟ ಸಮಯಕ್ಕಿಂತ ಹೆಚ್ಚಿನ ಸಮಯ ಪ್ರಚಾರಸಭೆ ನಡೆಸುತ್ತಿರುವ ಅಭ್ಯರ್ಥಿಗಳು ನೀತಿಸಂಹಿತೆ ಉಲ್ಲಂಘನೆ ಮಾಡುತ್ತಿದ್ದಾರೆ.

ಮೈತ್ರಿ ಅಭ್ಯರ್ಥಿ ಮುನಿಯಪ್ಪ ಸಭೆ

ಮೈತ್ರಿ ಪಕ್ಷದ ಅಭ್ಯರ್ಥಿ ಕೆ.ಎಚ್. ಮುನಿಯಪ್ಪ ಚಿಂತಾಮಣಿ ತಾಲೂಕಿನ ಹಲವೆಡೆ ಬಿರುಸಿನ ಪ್ರಚಾರ ಸಭೆ ನಡೆಸುತ್ತಿದ್ದಾರೆ. ಇಂದು ಚಿಂತಾಮಣಿಯಲ್ಲಿ ಕಾರ್ಯಕರ್ತರ ಸಭೆ ಏರ್ಪಡಿಸಲಾಗಿತ್ತು. ಈ ಸಭೆಯುದ್ದಕ್ಕೂ ಅವರು ಪ್ರಧಾನಿ ಮೋದಿಯವರ ಆಡಳಿತ ಹಾಗೂ ಕಾರ್ಯವೈಖರಿಯ ಬಗ್ಗೆ ಟೀಕಾ ಪ್ರಹಾರ ನಡೆಸಿದರು. ಆದರೆ ಸಭೆ ನಡೆಸಲು ಮಧ್ಯಾಹ್ನ1 ಗಂಟೆಯವರೆಗೂ ಅನುಮತಿ ನೀಡಲಾಗಿತ್ತು. ಆದರೆ 2 ಗಂಟೆಯಾದ್ರೂ ಸಭೆ ಮುಗಿಸದೆ ಹಾಗೆಯೇ ಮುಂದುವರೆಸುವ ಮೂಲಕ ಅವರು ಚುನಾವಣೆ ನೀತಿಸಂಹಿತೆ ಉಲ್ಲಂಘಿಸಿದರು. ಈ ವಿಷಯ ಇದೀಗ ಪ್ರತಿಪಕ್ಷವಾದ ಬಿಜೆಪಿ ನಾಯಕರ ಬಾಯಿಗೆ ಮೇವು ಸಿಕ್ಕಂತಾಗಿದೆ.

ಈ ಚುನಾವಣಾ ಸಭೆಯಲ್ಲಿ ಕೆ.ಹೆಚ್.ಮುನಿಯಪ್ಪ, ಸಿ.ಎಂ ಹಿಬ್ರಾಹಿಂ, ಸ್ಥಳೀಯ ಶಾಸಕ ಜೆ.ಕೆ ಕೃಷ್ಣಾರೆಡ್ಡಿ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತ ಮತದಾರರು ಭಾಗವಹಿಸಿದ್ದರು.

Intro:ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರವನ್ನು ಪಡೆದುಕೊಂಡಿರುವ ಚಿಂತಾಮಣಿ ಹಾಗೂ ಶಿಡ್ಲಘಟ್ಟ ಕ್ಷೇತ್ರಗಳು ಅಭ್ಯರ್ಥಿಗಳ ಪಾಲಿಗೆ ಬಹಳ ಮುಖ್ಯವಾದ ಕ್ಷೇತ್ರಗಳು ಇದರ ಸಲುವಾಗಿ ಸಾಕಷ್ಟು ಕಸರತ್ತು ನಡೆಸುತ್ತಿರುವ ಅಭ್ಯರ್ಥಿಗಳು ಚುರುಕು ಪ್ರಚಾರ ಶುರುಮಾಡಿದ್ದಾರೆ.

ಸದ್ಯ ಇದರ ಸಲುವಾಗಿಯೇ ಇಂದು ಮೈತ್ರಿ ಅಭ್ಯರ್ಥಿ ಕೆಎಚ್ ಮುನಿಯಪ್ಪ ಚಿಂತಾಮಣಿ ತಾಲೂಕಿನ ಹಲವೆಡೆ ಬಿರುಸಿನ ಪ್ರಚಾರ ಶುರುಮಾಡಿದ್ದಾರೆ.

Body:ಇನ್ನೂ ಕಾರ್ಯಕ್ರಮವನ್ನು ಅಲ್ಲಸಂಖ್ಯಾತರ ಮತದಾರರೊಂದಿಗೆ ಏರ್ಪಡಿಸಿದ್ದು ಸಭೆಯಲ್ಲಿ ಮುನಿಯಪ್ಪ ಸೇರಿದಂತೆ ಸಿಎಂ ಹಿಬ್ರಾಹಿಂ,ಸ್ಥಳೀಯ ಶಾಸಕ ಜೆಕೆ ಕೃಷ್ಣಾರೆಡ್ಡಿ,ಅಲ್ಲಸಂಖ್ಯಾತರ ಕಾರ್ಯಕರ್ತರು ಭಾಗಿಯಾಗಿದ್ದರು.

ಇನ್ನೂ ಸಭೆಯ ಉದ್ದಕ್ಕೂ ಮೋದಿ ಆಡಳಿತ ಹಾಗೂ ಕಾರ್ಯವೈಖರಿಯ ಬಗ್ಗೆ ಟೀಕಿಸುವ ಬರದಲ್ಲಿ ಸಮಯಪ್ರಜ್ಞೆ ಮರೆತು ಚುನಾವಣೆಯ ನೀತಿಸಂಹಿತೆಯನ್ನು ಉಲ್ಲಂಘನೆ ಮಾಡಿದ್ದಾರೆ. ಇಂದು‌ ಸಭೆಯನ್ನು ನಡೆಸಲು ಮಧ್ಯಾನ್ಹ 1 ಗಂಟೆಯವರೆಗೂ ಅನುಮತಿಯನ್ನು ನೀಡಿದ್ದು 2.15 ನಿಮಿಷಗಳಾದರು ಸಭೆಯನ್ನು ಮುಗಿಸದೇ ಮುಂದುವರೆಸಿದ್ದಾರೆ.

ಸದ್ಯ ಇದೇ ವಿಷಯ ಪ್ರತಿಪಕ್ಷಗಳಿಗೆ ಮತ್ತೇ ಮೇವು ಸಿಕ್ಕಿದಂತಿದೆ.

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.