ETV Bharat / state

ದಲಿತ ಕುಟುಂಬಕ್ಕೆ ದೇವಸ್ಥಾನದಲ್ಲಿ ಮದುವೆಗೆ ನಿರಾಕರಣೆ ಆರೋಪ: ತಹಶೀಲ್ದಾರ್​ಗೆ ದೂರು

ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನದ ಸಮುದಾಯ ಭವನದಲ್ಲಿ ದಲಿತ ಕುಟುಂಬದ ಮದುವೆಗೆ ನಿರಾಕರಿಸಿರುವಂತ ಘಟನೆ ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ನಡೆದಿದೆ.

Venkataramana Swamy Temple
ದಲಿತರು ಅಂತ ದೇವಸ್ಥಾನದಲ್ಲಿ ಮದುವೆಗೆ ನಿರಾಕರಣೆ
author img

By

Published : Nov 6, 2022, 5:11 PM IST

Updated : Nov 6, 2022, 6:05 PM IST

ಚಿಕ್ಕಬಳ್ಳಾಪುರ: ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನದ ಸಮುದಾಯ ಭವನದಲ್ಲಿ ದಲಿತ ಕುಟುಂಬವೊಂದರ ಮದುವೆಗೆ ನಿರಾಕರಿಸಿರುವ ಆರೋಪ ಕೇಳಿಬಂದಿದೆ. ಈ ಘಟನೆ ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ನಡೆದಿದೆ.

ತಾಲೂಕಿನ ಬ್ರಾಹ್ಮಣರ ಹಳ್ಳಿ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ವೆಂಕಟಲಕ್ಷ್ಮೀ ಎಂಬುವವರ ಮದುವೆ ಇದೇ ನವೆಂಬರ್ 3 ರಂದು ಗುಡಿಬಂಡೆಯ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ನಿಗದಿಯಾಗಿತ್ತು. ಆದರೆ ದೇವಸ್ಥಾನದ ಟ್ರಸ್ಟ್ ಕಾರ್ಯದರ್ಶಿ ಮಾಚಾವಲಹಳ್ಳಿ ವೆಂಕಟರಾಯಪ್ಪ ಎನ್ನುವವರು ದೇವಸ್ಥಾನದ ಸಮುದಾಯ ಭವನ ಈಗಾಗಲೇ ಬುಕ್ ಆಗಿದೆ, ಕೊಡಲು ಆಗಲ್ಲ ಎಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ದಲಿತರು ಅಂತ ದೇವಸ್ಥಾನದಲ್ಲಿ ಮದುವೆಗೆ ನಿರಾಕರಣೆ

ಇದರಿಂದ ಬೇಸರಗೊಂಡ ಕುಟುಂಬ ವಿಧಿಯಿಲ್ಲದೆ ಬಾಗಿಲು ಹಾಕಿದ ದೇವಸ್ಥಾನದ ಮುಂದೆ ಮದುವೆ ಮಾಡಿಕೊಂಡು ಬಂದಿದೆ. ಘಟನೆಯ ನಂತರ ರೋಸಿಹೋದ ದಲಿತ ಕುಟುಂಬ ಗುಡಿಬಂಡೆ ತಹಶೀಲ್ದಾರ್ ಹಾಗೂ ಸಮಾಜ ಕಲ್ಯಾಣಾಧಿಕಾರಿಗಳಿಗೆ ದೂರು ನೀಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಗುಡಿಬಂಡೆ ತಹಶೀಲ್ದಾರ್ ಸಿಗ್ಬತುಲ್ಲಾ ಅವರು, 'ದೇವಾಲಯದ ಕಲ್ಯಾಣ ಮಂಟಪದಲ್ಲಿ ದಲಿತರಿಗೆ ವಿವಾಹಕ್ಕೆ ಅವಕಾಶ ನೀಡಿಲ್ಲ ಎಂಬ ದೂರು ನನಗೆ ಬಂದಿದೆ. ನನ್ನ ಗಮನಕ್ಕೆ ಬಂದ ಕೂಡಲೇ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷರಿಗೆ ನೋಟಿಸ್ ನೀಡಿದ್ದೇನೆ. ವೆಂಕಟರಮಣ ಸ್ವಾಮಿ ದೇವಸ್ಥಾನವು ಮುಜರಾಯಿ ಇಲಾಖೆಗೆ ಸೇರಿದೆ. ಈ ಬಗ್ಗೆ ಕೂಡಲೇ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು' ಎಂದು ತಿಳಿಸಿದರು.

ಇದನ್ನೂ ಓದಿ: ಮತ ಹಾಕಲಿಲ್ಲವೆಂದು ತರಗತಿಗೆ ಬಾರದಂತೆ ದಲಿತ ವಿದ್ಯಾರ್ಥಿನಿಗೆ ಸೂಚನೆ: ದೂರು ದಾಖಲು

ಘಟನೆ ಬಗ್ಗೆ ಸ್ಥಳೀಯ ದಲಿತ ಸಂಘಟನೆಗಳ ಮುಖಂಡರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಲಿತರ ವಿರುದ್ಧ ಶೋಷಣೆ ನಡೆಸಿದ ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Last Updated : Nov 6, 2022, 6:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.