ಚಿಕ್ಕಬಳ್ಳಾಪುರ: ನಗರದ ಹೊರವಲಯದ ಬಿ.ಬಿ ರಸ್ತೆಯಲ್ಲಿರುವ ಗೋಲ್ಡನ್ ಬಾರ್ ಆ್ಯಂಡ್ ರೆಸ್ಟೋರೆಂಟ್‍ಗೆ ಕನ್ನ ಹಾಕಿ ಮದ್ಯ ಕಳವು ಮಾಡಿದ ಪ್ರಕರಣ ವರದಿಯಾಗಿದೆ.
ಖದೀಮರು ಬಾರ್ ಹಿಂಭಾಗದ ಗೋಡೆಗೆ ಕಿಂಡಿ ಕೊರೆದು ಮದ್ಯದ ಬಾಟಲಿಗಳನ್ನು ಕದ್ದೊಯ್ದಿದ್ದಾರೆ.
ಸ್ಥಳಕ್ಕೆ ಚಿಕ್ಕಬಳ್ಳಾಪುರ ವೃತ್ತ ನಿರೀಕ್ಷಕ ಸುದರ್ಶನ್ ಹಾಗೂ ನಂದಿಗಿರಿಧಾಮ ಪಿಎಸ್‍ಐ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.