ಚಿಕ್ಕಬಳ್ಳಾಪುರ: ಜಿಲ್ಲೆಯ ಗುಡಿಬಂಡೆ ತಾಲೂಕಿನ ಯರಪಲ್ಲಿ ಗ್ರಾಮದ ಬಳಿ ಬೊಲೆರೋ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ರವೀಂದ್ರ ರೆಡ್ಡಿ (45) ಮೃತ ಬೈಕ್ ಸವಾರ. ತರಕಾರಿ ತುಂಬಿಕೊಂಡು ಬೊಲೆರೋ ವಾಹನ ಬಾಗೇಪಲ್ಲಿಗೆ ಹೋಗುವಾಗ ಬಾಗೇಪಲ್ಲಿ ಕಡೆಯಿಂದ ಬಂದ ಬೈಕ್ ಮಧ್ಯೆ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಗುಡಿಬಂಡೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.