ಚಿಕ್ಕಬಳ್ಳಾಪುರ: ಭೂ ಪರಿವರ್ತನೆ ಮಾಡಲು 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಕಂದಾಯ ನಿರೀಕ್ಷಕ ಚಂದ್ರಶೇಖರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ನೂತನ ತಾಲೂಕಾಗಿ ಘೋಷಣೆಯಾಗಿರುವ ಚೇಳೂರು ನಾಡಕಚೇರಿಯ ಕಂದಾಯ ನಿರೀಕ್ಷಕ ಚಂದ್ರಶೇಖರ್, ಪುಲಗಲ್ ಪಂಚಾಯಿತಿಯ ಊದವಾರಪಲ್ಲಿ ನಿವಾಸಿ ಆರ್.ವೆಂಕಟರಮಣ ಎಂಬುವರಿಗೆ ಭೂ ಪರಿವರ್ತನೆ ಮಾಡಿಕೊಡಲು 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ.
ಓದಿ: ಪಾಂಡ್ಯ ಸಹೋದರರಿಗೆ ಪಿತೃ ವಿಯೋಗ: ಮುಷ್ತಾಕ್ ಅಲಿ ಟೂರ್ನಿ ತೊರೆದ ಕೃನಾಲ್
ವೆಂಕಟರಮಣ ಅವರು ಈ ಬಗ್ಗೆ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದು, ನಾಡಕಚೇರಿಯಲ್ಲಿ ಹಣ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.