ಚಿಕ್ಕಬಳ್ಳಾಪುರ : ಕೊರೊನಾ ವೈರಸ್‌ನಿಂದಾಗಿ ದೇಶದಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಯಾವುದೇ ಸಭೆ- ಸಮಾರಂಭಗಳನ್ನ ಮಾಡಬಾರದು ಎಂಬ ಆದೇಶವಿದ್ದರೂ ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾತ್ರ ಸಭೆ ನಡೆಸಿ ಸರ್ಕಾರದ ಆದೇಶ ಗಾಳಿಗೆ ತೂರಿದ್ದಾರೆ.
ಗೌರಿಬಿದನೂರು ತಾಲೂಕು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ವತಿಯಿಂದ ಮಾರ್ಚ್-ಏಪ್ರಿಲ್‌ನಲ್ಲಿ ನಡೆಯುವ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗೆ ಹಾಜರಾಗುತ್ತಿರುವ ಎಲ್ಲಾ ಸರ್ಕಾರಿ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಎಸಿಸಿ ಟ್ರಸ್ಟ್ ವತಿಯಿಂದ ಸಾಧನಾ ಪರೀಕ್ಷೆ-2 ಪ್ರಶ್ನೋತ್ತರ ಪತ್ರಿಕೆಗಳು ಮತ್ತು ವಿಶೇಷ ಪಠ್ಯಕ್ರಮ ಅಭ್ಯಾಸ ಪುಸ್ತಕಗಳನ್ನು ಮುದ್ರಿಸಿ ವಿತರಿಸಲಾಗಿದೆ.
ಉತ್ತಮ ಫಲಿತಾಂಶ ಪಡೆಯಲು ಈ ಮೂಲಕ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಸಿಗಲೆಂದು ಶುಭ ಹಾರೈಸುವ ಕಾರ್ಯಕ್ರಮವನ್ನು ತಾಲೂಕಿನ ಅಲಕಾಪುರ ಪ್ರೌಢ ಶಿಕ್ಷಣ ಶಾಲೆಯಲ್ಲಿ ಸುಮಾರು 150ಹೆಚ್ಚು ಶಿಕ್ಷಕರ ಜೊತೆ ಎಸಿಸಿ ಕಾರ್ಖಾನೆಯ ಸಿಬ್ಬಂದಿ, ಜಿಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಂದ್ರ ಸಭೆ ನಡೆಸಿ ಸರ್ಕಾರದ ಆದೇಶವನ್ನು ಗಾಳಿಗೆ ತೂರಿದ್ದಾರೆ.