ಚಿಕ್ಕಬಳ್ಳಾಪುರ : ಕ್ಷುಲ್ಲಕ ಕಾರಣಕ್ಕಾಗಿ ಬಾಮೈದುನನೇ ಬಾವನನ್ನು ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದಿದೆ.
ಬಾಮೈದಾ ಕೊಂಡಪ್ಪ ಎಂಬಾತ ತನ್ನ ಬಾವನಾದ ಮಾಲಕೊಂಡಪ್ಪ(37) ಎಂಬುವನನ್ನು ಹತ್ಯೆ ಮಾಡಿದ್ದಾನೆ. ಆಂಧ್ರ ಮೂಲದ ಇಬ್ಬರೂ ಕೆಲಸಕ್ಕಾಗಿ ಗೌರಿಬಿದನೂರಿಗೆ ಆಗಮಿಸಿದ್ದು, ಇಲ್ಲಿಯೇ ನೆಲೆಸಿದ್ದರೂ ಎನ್ನಲಾಗಿದೆ. ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಆರಂಭಗೊಂಡ ಜಗಳ ಕೊಲೆಯಲ್ಲಿ ಅಂತ್ಯಕಂಡಿದೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಪ್ರಭುಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗೌರಿಬಿದನೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.