ಚಿಕ್ಕಬಳ್ಳಾಪುರ : ಕುಡುಕನೊಬ್ಬ ಅಮಲಿನಲ್ಲಿ ನಡು ರಸ್ತೆಯಲ್ಲಿ ಅಂಗಿ ಬಿಚ್ಚಿ ಉರಿ ಬಿಸಿಲಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ-ಬಾಗೇಪಲ್ಲಿ ಮಾರ್ಗ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ನಡೆದಿದೆ.
ಕ್ಷುಲಕ ಕಾರಣಕ್ಕೆ ಕುಡಿದ ಅಮಲಿನಲ್ಲಿ ಪ್ರಜ್ಞೆ ಇಲ್ಲದೆ ಅಂಗಿ ಕಳಚಿ ರಾಷ್ಟ್ರೀಯ ಹೆದ್ದಾರಿ 7 ರ ನಡು ರಸ್ತೆಯಲ್ಲಿ ನಿಂತು ಆಂಧ್ರ ಮೂಲದ ನಾಗರಾಜ್ ಎಂಬುವ ವ್ಯಕ್ತಿ ಸುಮಾರು 2 ತಾಸಿಗೂ ಹೆಚ್ಚಿನ ಸಮಯ ಆಂಧ್ರ ಕಡೆಗೆ ಹೋಗುವ ವಾಹನಗಳಿಗೆ ಅಡ್ಡ ನಿಂತು ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ. ಇನ್ನು ವಾಹನಗಳು ನಿಲ್ಲಿಸಿ ನಾಗರಾಜ್ ಪ್ರಶ್ನೆ ಮಾಡಿದರೆ ಯಾವುದಕ್ಕೂ ಲೆಕ್ಕಿಸದೆ ಮೊಂಡುತನದಿಂದ ವರ್ತಿಸಿದ್ದಾನೆ ಎನ್ನಲಾಗಿದೆ.