ETV Bharat / state

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 9 ಕೊರೊನಾ ಪ್ರಕರಣಗಳು ಪತ್ತೆ: ಜಿಲ್ಲಾಧಿಕಾರಿ

ಕೊರೊನಾ ಕೆಂಗಣ್ಣು ಚಿಕ್ಕಬಳ್ಳಾಪುರದ ಮೇಲೆ ಬಿದ್ದಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 9 ಪ್ರಕರಣಗಳು ವರದಿಯಾಗಿವೆ. ಇದನ್ನು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

9 corona cases in Chikkaballapur district: DC
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 9 ಕೊರೊನಾ ಪ್ರಕರಣಗಳು: ಡಿಸಿ ಸ್ಪಷ್ಟಣೆ
author img

By

Published : Mar 29, 2020, 8:25 AM IST

ಚಿಕ್ಕಬಳ್ಳಾಪುರ: ಕೊರೊನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು, ಜಿಲ್ಲೆಯಲ್ಲಿ ಹೊಸದಾಗಿ ಐವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಸ್ಪಷ್ಟಪಡಿಸಿದ್ದಾರೆ.

ಈ ಮೊದಲು 4 ಮಂದಿಗೆ ಸೋಂಕು ದೃಢಪಟ್ಟಿದ್ದು, ಅದರಲ್ಲಿ ಒಬ್ಬರು ಸಾವನ್ನಪ್ಪಿದ್ದರು. ಮೆಕ್ಕಾ ಪ್ರವಾಸ ಕೈಗೊಂಡು ವಾಪಸ್ ಆಗಿದ್ದ 31 ವರ್ಷದ ವ್ಯಕ್ತಿಗೆ ಕೊರೊನಾ ವೈರಸ್ ಕಾಣಿಸಿಕೊಂಡಿತ್ತು. ನಂತರ ಅವರ ತಾಯಿ ಹಾಗೂ ಚಿಕ್ಕಮ್ಮ ಸೇರಿ ಮೂವರಿಗೆ ಸೋಂಕು ತಗುಲಿತ್ತು. ಈ ಮೂವರೂ ಸಹ ಮೆಕ್ಕಾ ಪ್ರವಾಸದಿಂದ ವಾಪಸ್ ಮನೆಗೆ ಬಂದಿದ್ದರು. ಈಗ ಮೊದಲ ಪ್ರಕರಣದ ಅಂದರೆ, ಆ 31 ವರ್ಷದ ವ್ಯಕ್ತಿಯ ತಂದೆಗೂ ಸೋಂಕು ಬಾಧಿಸಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 9 ಕೊರೊನಾ ಪ್ರಕರಣಗಳು: ಡಿಸಿ ಸ್ಪಷ್ಟನೆ

ಗೌರಿಬಿದನೂರು ನಗರದಲ್ಲೇ ಮೆಕ್ಕಾ ಪ್ರವಾಸದಿಂದ ಬಂದಿದ್ದ ಮಹಿಳೆ ಕೊರೊನಾಗೆ ಬಲಿಯಾಗಿದ್ದರು. ಈಗ ಮೃತ ಮಹಿಳೆಯ ಮಗ ಹಾಗೂ ಸೊಸೆ ಹಾಗು ಅವರ ಮೊಮ್ಮಗ ಸೇರಿದಂತೆ ಸೊಸೆಯ ತಮ್ಮನಿಗೂ ಕೊರೊನಾ ಸೋಂಕು ಪಾಸಿಟಿವ್ ಬಂದಿದೆ.

ಹೀಗಾಗಿ ಈ ಮೊದಲ 4 ಪ್ರಕರಣಗಳ ಜೊತೆಗೆ ಇಂದು ಹೊಸದಾಗಿ 5 ಪ್ರಕರಣಗಳು ಸೇರಿ ಒಟ್ಟು 9 ಪಾಸಿಟಿವ್ ಜಿಲ್ಲೆಯಲ್ಲಿ ವರದಿಯಾಗಿದೆ.

ಇದಲ್ಲದೇ ಮೊದಲ ಪ್ರಕರಣದ ಅಂದರೆ ಆ 31 ವರ್ಷದ ವ್ಯಕ್ತಿಯ ಸಹೋದರಿಯರಿಗೂ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಅವರಲ್ಲೂ ಸೋಂಕಿನ ಲಕ್ಷಣಗಳು ಗೋಚರಿಸಿವೆ. ಅವರಿಬ್ಬರ ಅಂತಿಮ ವರದಿಗಾಗಿ ಕಾಯುತ್ತಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಈಗಾಗಲೇ ಹೊಸದಾಗಿ ದೃಢಪಟ್ಟಿರುವ 5 ಮಂದಿ ಸೇರಿದಂತೆ ಶಂಕಿತ ಇಬ್ಬರನ್ನೂ ಸಹ ಚಿಕ್ಕಬಳ್ಳಾಪುರ ನಗರದ ಹಳೇಯ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್‍ನಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.