ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹೊಸದಾಗಿ 73 ಸೊಂಕಿತರು ಗುಣಮುಖರಾಗಿದ್ದು, ಇದರ ಮಧ್ಯೆ 47 ಸೊಂಕಿತರಿಗೆ ಸೊಂಕು ಧೃಡಪಟ್ಟಿದೆ. ಜತೆತಗೆ ಓರ್ವನಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿ 10, ಚಿಂತಾಮಣಿ 16, ಗೌರಿಬಿದನೂರು 8, ಬಾಗೇಪಲ್ಲಿ 11 ಹಾಗೂ ಗುಡಿಬಂಡೆಯಲ್ಲಿ 2 ಸೊಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ 47 ಪ್ರಕರಣ ದಾಖಲಾಗಿವೆ. 15 ಜನರು ಸ್ಥಳೀಯ ಪ್ರವಾಸ,ಐಎಲ್ಐ ನಿಂದ 9 ಸೊಂಕಿತರು ಹಾಗೂ ಉಳಿದ 23 ಜನರಿಗೆ ಸೊಂಕಿತರ ಸಂಪರ್ಕದಿಂದ ಸೊಂಕು ಧೃಡಪಟ್ಟಿದೆ. ಚಿಂತಾಮಣಿ 20 ಸೊಂಕಿತರು,ಚಿಕ್ಕಬಳ್ಳಾಪುರ 31, ಗೌರಿಬಿದನೂರು 14, ಶಿಡ್ಲಘಟ್ಟ 5,ಬಾಗೇಪಲ್ಲಿ 1,ಗುಡಿಬಂಡೆ 2 ಸೊಂಕಿತರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
ಕೆಮ್ಮು ಹಾಗೂ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಚಿಂತಾಮಣಿ ವ್ಯಾಪ್ತಿಯ 34 ವರ್ಷದ ವ್ಯಕ್ತಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾನೆ. ಈ ಮೂಲಕ ಜಿಲ್ಲೆಯಲ್ಲಿ ಮೃತರ ಸಂಖ್ಯೆ 49ಕ್ಕೆ ಏರಿಕೆಯಾಗಿದೆ. ಸದ್ಯ 602 ಸಕ್ರಿಯ ಸೊಂಕಿತರಿಗೆ ಜಿಲ್ಲೆಯ ಐಸೊಲೇಷನ್, ಹೋಂ ಐಸೊಲೇಷನ್ ಸೇರಿದಂತೆ ತಾಲೂಕಿನ ಕೊವೀಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 2,811ಕ್ಕೆ ಆಗಿದೆ.