ETV Bharat / state

ಹಳೆ ವೈಷಮ್ಯಕ್ಕಾಗಿ ಗೋಡಂಬಿ ತೋಟಕ್ಕೆ ಬೆಂಕಿ: ನ್ಯಾಯಕ್ಕಾಗಿ ಕೃಷಿಕನ ಅಳಲು - Sheedlaghatta Police Station

ದೇವರಮಳ್ಳೂರು ಗ್ರಾಮದ ಮುನಿರಾಜು ಮತ್ತು ಕೃಷ್ಣಪ್ಪ ಮಾರಾಟ ಮಾಡಲು ಫಸಲು ಬಿಟ್ಟಿದ್ದ ಗೋಡಂಬಿ ತೋಟವನ್ನು ಅತಿಕ್ರಮ ಪ್ರವೇಶ ಮಾಡಿ 4 ಎಕರೆಗೆ ಬೆಂಕಿ ಇಟ್ಟಿದ್ದಾರೆ ಎಂದು ರೈತ ಮುನಿಬೈರಪ್ಪ ಆರೋಪಿಸಿದ್ದಾರೆ.

4 acre cashew crops bured because of old dispute of land
ಹಳೆ ದ್ವೇಷಕ್ಕೆ ಹೊತ್ತಿ ಉರಿದ 4 ಎಕರೆ ಗೋಡಂಬಿ ತೋಟ: ನ್ಯಾಯಕ್ಕಾಗಿ ಅಲೆಯುತ್ತಿದೆ ಬಡಜೀವ
author img

By

Published : May 26, 2020, 10:08 PM IST

ಚಿಕ್ಕಬಳ್ಳಾಪುರ: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಗೋಡಂಬಿ ಬೆಳೆಗೆ ಬೆಂಕಿ ಇಟ್ಟ ಪ್ರಕರಣ ಸಂಬಂಧಿಸಿದಂತೆ ನ್ಯಾಯಕ್ಕಾಗಿ 10 ದಿನಗಳಿಂದ ರೈತನೋರ್ವ ಪರದಾಡುತ್ತಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮುನಿಬೈರಪ್ಪ ತನ್ನ 5 ಎಕರೆ 20 ಕುಂಟೆ ಜಮೀನಿನಲ್ಲಿ ಸುಮಾರು 12 ವರ್ಷಗಳಿಂದ ಗೋಡಂಬಿ ಬೆಳೆಯನ್ನು ನಂಬಿ ಜೀವನವನ್ನು ಸಾಗಿಸುತ್ತಿದ್ದು, ಪ್ರತಿ ವರ್ಷ ಸುಮಾರು 5 ಲಕ್ಷ ರೂ.ಯಷ್ಟು ಆದಾಯ ಬರುತ್ತಿತ್ತು.

ಜಮೀನು ವಿವಾದದ ಹಿನ್ನೆಲೆಯಲ್ಲಿ ಅದೇ ಗ್ರಾಮದ ಮುನಿರಾಜು ಹಾಗೂ ಕೃಷ್ಣಪ್ಪ ನಡುವೆ ವೈಷಮ್ಯ ಉಂಟಾಗಿದೆ. ಅಲ್ಲದೆ ಮಗ ಹಾಗೂ ಹೆಂಡತಿ ಮೇಲೆ ತೀವ್ರ ಹಲ್ಲೆ ನಡೆಸಿದ್ದರು ಎಂದು ಆರೋಪಿಸಿ ಈ ಬಗ್ಗೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದೇ ವಿಚಾರವಾಗಿ ಗ್ರಾಮದ ಮುನಿರಾಜು ಮತ್ತು ಕೃಷ್ಣಪ್ಪ ಮಾರಾಟ ಮಾಡಲು ಫಸಲು ಬಿಟ್ಟಿದ್ದ ಗೋಡಂಬಿ ತೋಟವನ್ನು ಅತಿಕ್ರಮ ಪ್ರವೇಶ ಮಾಡಿ 4 ಎಕರೆಗೆ ಬೆಂಕಿ ಇಟ್ಟಿದ್ದಾರೆ ಎಂದು ರೈತ ಮುನಿಬೈರಪ್ಪ ಆರೋಪಿಸಿದ್ದಾರೆ.

ಪೊಲೀಸ್ ಠಾಣೆಯಲ್ಲಿ ಸಾಕ್ಷಿ‌ ಸಮೇತ ದೂರು ಕೊಟ್ಟರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಅಲವತ್ತುಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.