ಚಿಕ್ಕಬಳ್ಳಾಪುರ: ಜಿಲ್ಲೆಯ ಚೇಳೂರು (ನೂತನ ತಾಲೂಕು) ಮಂಡ್ಯಂಪಲ್ಲಿಯಲ್ಲಿ ಪಬ್ ಜಿ ಗೇಮ್ ಆಡಲು ಮೊಬೈಲ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಮನನೊಂದಿರುವ ಬಾಲಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಯಶ್ವಂತ್ ತನ್ನ ಅಕ್ಕಳಾದ ಅಖಿಲಳ ಬಳಿ ಮೊಬೈಲ್ ಕೇಳಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿರುವ ಅವರು, ಹೆಚ್ಚು ಮೊಬೈಲ್ ಬಳಸಬಾರದು ಎಂದು ಬುದ್ಧಿ ಮಾತು ಹೇಳಿದ್ದರು. ಇಷ್ಟಕ್ಕೆ ಕೋಪಗೊಂಡ ಯಶ್ವಂತ್ ಗಿಡಗಳಿಗೆ ಸಿಂಪಡಿಸಲು ತಂದಿಟ್ಟಿದ್ದ ಕೀಟನಾಶಕ ಸೇವಿಸಿದ್ದ. ಕೂಡಲೇ ಆತನನ್ನು ಚೇಳೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದ್ರೆ ವೇಳೆ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾನೆ.