ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇಂದು 72 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.
ಇಂದು ಚಿಕ್ಕಬಳ್ಳಾಪುರ 17, ಚಿಂತಾಮಣಿ 1, ಗೌರಿಬಿದನೂರು 29, ಬಾಗೇಪಲ್ಲಿ 9 ಹಾಗೂ ಗುಡಿಬಂಡೆಯಲ್ಲಿ 6, ಶಿಡ್ಲಘಟ್ಟ 10 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3480 ಕ್ಕೆ ಏರಿಕೆಯಾಗಿದೆ.
ಮೃತಪಟ್ಟವರ ವಿವರ:
ಇಂದು ಇಬ್ಬರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಚಿಂತಾಮಣಿಯ 65 ವರ್ಷದ ವ್ಯಕ್ತಿ ಹಾಗೂ 37 ವರ್ಷದ ಪುರುಷ ಶಿಡ್ಲಘಟ್ಟದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 57 ಕ್ಕೆ ಏರಿಕೆಯಾಗಿದೆ.
ಗುಣಮುಖರಾದವರ ವಿವರ:
ಇನ್ನೂ ಚಿಂತಾಮಣಿ 19 ಸೊಂಕಿತರು, ಚಿಕ್ಕಬಳ್ಳಾಪುರ 25, ಬಾಗೇಪಲ್ಲಿ 14, ಶಿಡ್ಲಘಟ್ಟ 13, ಗೌರಿಬಿದನೂರು 32 ಹಾಗೂ ಗುಡಿಬಂಡೆ ವ್ಯಾಪ್ತಿಯಲ್ಲಿ 2 ಸೇರಿದಂತೆ ಇಂದು 105 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಸದ್ಯ 563 ಸಕ್ರಿಯ ಸೋಂಕಿತರಿಗೆ ಜಿಲ್ಲೆಯ ಐಸೊಲೇಷನ್ ಸೇರಿದಂತೆ ತಾಲೂಕಿನ ಕೊವೀಡ್ ಕೇರ್ ಸೆಂಟರ್ , ಹೋಂ ಐಸೋಲೇಷನ್ ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.