ಗೌರಿಬಿದನೂರು (ಚಿಕ್ಕಬಳ್ಳಾಪುರ): ಭಾರತ ಮಾತಾ ಸೇವಾ ಟ್ರಸ್ಟ್ ಅಡಿಯಲ್ಲಿ ಇಂದು ವಿಶೇಷ ಪೂಜೆ ನಡೆಸುವ ಮೂಲಕ ತಾಲೂಕಿನ ನಾಗಸಂದ್ರ ಗ್ರಾಮದ ಸುಮಾರು 10 ಕುಟುಂಬಗಳಿಗೆ ಸೇರಿದ 100ಕ್ಕೂ ಅಧಿಕ ಜನರನ್ನು ಮರಳಿ ಹಿಂದೂ ಧರ್ಮಕ್ಕೆ ಬರಮಾಡಿಕೊಳ್ಳಲಾಯಿತು.
ತಾಲೂಕಿನ ಇತಿಹಾಸಪ್ರಸಿದ್ಧ ವಿದುರಾಶ್ವತ್ಥ ಸ್ವಾಮಿ ದೇಗುಲದ ಸಭಾಂಗಣದಲ್ಲಿ ವಿವಿಧ ಹೋಮ- ಹವನಗಳನ್ನು ನಡೆಸಿ, ಪೂಜೆ ಸಲ್ಲಿಸಿ ನಂತರ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ಕುಟುಂಬಗಳನ್ನು ಹಿಂದೂ ಧರ್ಮಕ್ಕೆ ಸೇರ್ಪಡೆಗೊಳಿಸಲಾಯಿತು.
'ಮರುಳು ಮಾತಿಗೆ ಮಾರು ಹೋಗಿ ಮತಾಂತರಗೊಳ್ಳುತ್ತಿರುವುದು ಹೆಚ್ಚುತ್ತಿದೆ. ಯಾವುದೇ ಧರ್ಮವಾಗಿರಲಿ ಜೀವನ ನಡೆಸುವುದಕ್ಕೆ ತಮ್ಮದೇ ಆದ ಆತ್ಮಬಲ, ದೈಹಿಕ ಬಲ, ಮನಃಶಾಂತಿ ಇಟ್ಟುಕೊಳ್ಳಬೇಕು. ಮತಾಂತರಗೊಳ್ಳುವುದರಿಂದಲೇ ಸಮಸ್ಯೆ ಬಗೆಹರಿಯಲಿದೆ ಎಂಬುದು ತಪ್ಪು ಕಲ್ಪನೆ'.
- ಎನ್.ಎಂ ರವಿನಾರಾಯಣರೆಡ್ಡಿ, ಅಧ್ಯಕ್ಷ ,ಭಾರತಮಾತಾ ಸೇವಾ ಟ್ರಸ್ಟ್
ಈ ವೇಳೆ ಭಾರತ ಮಾತಾ ಸೇವಾ ಟ್ರಸ್ಟ್ ವತಿಯಿಂದ ಆರೋಗ್ಯ ಕಾರ್ಡ್ ಹಸ್ತಾಂತರಿಸಲಾಯಿತು.